ಮುಂಬಯಿ-ಮಂಗಳೂರು ನಡುವೆ ವಿಶೇಷ ಎಸಿ ರೈಲು

Update: 2016-05-21 17:29 GMT

ಉಡುಪಿ, ಮೇ 12: ಮಂಗಳೂರು-ಮುಂಬಯಿ ನಡುವಿನ ಪ್ರಯಾಣಿಕರ ಒತ್ತಡವನ್ನು ನಿಭಾಯಿಸಲು ಕೊಂಕಣ ರೈಲು ಮಾರ್ಗದಲ್ಲಿ ಮುಂಬಯಿಯ ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್‌ಟಿಟಿ)- ಮಂಗಳೂರು ಜಂಕ್ಷನ್- ಎಲ್‌ಟಿಟಿ ನಡುವೆ ತಾತ್ಕಾಲಿಕ ಎಸಿ ರಿಸರ್ವ್ ವಿಶೇಷ ರೈಲನ್ನು ಮೇ 24, 31 ಹಾಗೂ ಜೂ.7ರಂದು ಓಡಿಸಲಾಗುತ್ತಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ರೈಲು ನಂ.02133 ವಿಶೇಷ ರೈಲು ಮೇ 24, 31, ಜೂ.7ರಂದು ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಮಧ್ಯರಾತ್ರಿ 12:45ಕ್ಕೆ ಹೊರಡಲಿದ್ದು, ಅದೇ ದಿನ ಸಂಜೆ 6:00 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ. ಮರು ಪ್ರಯಾಣದಲ್ಲಿ ರೈಲು ನಂ.02134 ಮಂಗಳೂರು ಜಂಕ್ಷನ್‌ನಿಂದ ಅದೇ ದಿನ ಗಳಂದು ರಾತ್ರಿ 8:30ಕ್ಕೆ ನಿರ್ಗಮಿಸಲಿದ್ದು, ಮರುದಿನ ಅಪರಾಹ್ನ 1:15ಕ್ಕೆ ಮುಂಬಯಿ ತಲುಪಲಿದೆ.

ಈ ರೈಲು 17 ಕೋಚ್‌ಗಳನ್ನು ಹೊಂದಿದ್ದು, ಥಾಣೆ, ಪನ್ವೇಲ್, ರೋಹಾ, ಖೇಡ್, ಚಿಪ್ಲುಣ್, ರತ್ನಗಿರಿ, ಕುಡಲ್, ಸಾವಂತವಾಡಿ ರೋಡ್, ತೀವಿಂ, ಕರ್ಮಿಲಿ, ಮಡಂಗಾವ್,ಕಾರವಾರ, ಕುಮಟಾ, ಭಟ್ಕಳ, ಮೂಕಾಂಬಿಕಾ ರೋಡ್, ಬೈಂದೂರು, ಕುಂದಾಪುರ, ಉಡುಪಿ ಹಾಗೂ ಮುಲ್ಕಿ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News