ನಿಮ್ಮ ಶೂ, ಚಪ್ಪಲಿಗಳನ್ನು ಚೆನ್ನಾಗಿಟ್ಟುಕೊಳ್ಳುವುದು ಹೇಗೆ?

Update: 2016-05-22 06:08 GMT

ನಿಮ್ಮ ಶೂಗಳನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಅದಕ್ಕೆ ಪಾಲಿಶ್ ಮಾಡಿ ಮತ್ತು ರೊಟೇಶನಿನಲ್ಲಿ ಚಪ್ಪಲಿಗಳನ್ನು ಹಾಕಿಕೊಳ್ಳಿ. ಒಂದೇ ಚಪ್ಪಲಿಯನ್ನು ನಿತ್ಯವೂ ಬಳಸಬೇಡಿ. ಇಲ್ಲಿದೆ ಚಪ್ಪಲಿ ರಕ್ಷಣೆಗೆ ಕೆಲವು ಸಲಹೆಗಳು.

ಕಂಡೀಷನಿಂಗ್: ಶೂಗಳನ್ನು ವಾರಕ್ಕೊಮ್ಮೆ ಪಾಲಿಶಿಂಗ್ ಮಾಡುವುದರಿಂದ ಅದು ಅತ್ಯುತ್ತಮವಾಗಿ ಕಾಣಿಸುತ್ತದೆ. ಅಲ್ಲದೆ ಧೀರ್ಘ ಕಾಲ ಬಾಳಿಕೆ ಬರಲು ನೆರವಾಗುತ್ತದೆ. ವ್ಯಾಕ್ಸ್ ಪಾಲಿಶ್ ಮಾಡುವ ಮೊದಲು ಕ್ರೀಮ್ ಪಾಲಿಶ್ ಕೋಟ್ ಕೊಡಬೇಕು.

ಶೂ ರೊಟೇಶನ್: ಸವೆತ ಮತ್ತು ಶೂಗಳು ಹರಿಯುವುದನ್ನು ತಪ್ಪಿಸಲು ಒಂದಕ್ಕಿಂತ ಹೆಚ್ಚು ಜೋಡಿ ಚಪ್ಪಲಿ ಹೊಂದಿರಬೇಕು ಮತ್ತು ಅವುಗಳನ್ನು ದಿನಕ್ಕೊಂದರಂತೆ ಧರಿಸಬೇಕು. ಒಂದೇ ಚಪ್ಪಲಿ ನಿತ್ಯ ಧರಿಸಿದಲ್ಲಿ ಸವೆಯುವುದು ಹೆಚ್ಚು.

ಶೂ ಹಾರ್ನ್ ಬಳಸಿ: ಶೂಗೆ ಹಾರ್ನ್ ಬಳಸುವುದರಿಂದ ಅದು ಹೀಲ್‌ನಲ್ಲಿ ಸವೆದು ಮುರಿದು ಹೋಗುವುದನ್ನು ತಪ್ಪಿಸಬಹುದು.

ಶೂಗಳು ಒಣಗಿರಲಿ: ಧರಿಸಿದ ಮೇಲೆ ಒದ್ದೆಯಾದ ಶೂವನ್ನು ಬಿಸಿ ಇರುವ ಕೋಣೆಯಲ್ಲಿ ಸಹಜವಾಗಿ ಒಣಗಲು ಬಿಡಿ. ಒಣಗಿಸಲು ಡ್ರೈಯರ್ ಬಳಸಬೇಡಿ. ಡ್ರೈಯರಿನಿಂದ ಒಣಗಿಸಿದರೆ ಹೆಚ್ಚು ಒಣಗಿ ಗಟ್ಟಿಯಾಗಿಬಿಡಬಹುದು.

ನಿತ್ಯದ ನಿರ್ವಹಣೆ ಮುಖ್ಯ: ಆಗಾಗ ಶೂಗಳ ನಿರ್ವಹಣೆ ಮಾಡಬೇಕು. ಶೂಗಳ ಸೋಲ್ ಗಳಲ್ಲಿ ತೂತು ಬಂದರೆ ಅಥವಾ ಸವೆದು ಹೋದಲ್ಲಿ ಬದಲಿಸುವುದು. ಉತ್ತಮ ರಿಪೇರಿ ಕೆಲಸ ಮಾಡುವವನ ಬಳಿಯೇ ಶೂಗಳ ರಿಪೇರಿ ಮಾಡಿಸಿರಿ.

ಕೃಪೆ: www.news18.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News