ಜೀವದ ಆಸೆಬಿಟ್ಟು ಸಿಂಹದ ಬೋನಿಗೆ ಜಿಗಿದ, ಎರಡು ಸಿಂಹದ ಪ್ರಾಣಕ್ಕೆ ಕಂಟಕವಾದ!

Update: 2016-05-22 08:44 GMT

ಸ್ಯಾಂಟಿಯಾಗೊ, ಮೇ 22: ವ್ಯಕ್ತಿಯೋರ್ವ ಜೀವದ ಆಸೆ ಬಿಟ್ಟು ನಗ್ನನಾಗಿ ಸಿಂಹದ ಬೋನಿಗೆ ಜಿಗಿದ. ಆದರೆ, ವ್ಯಕ್ತಿ ಬದುಕುಳಿದ, ಬೋನಿನಲ್ಲಿದ್ದ ಆ ಎರಡು ಸಿಂಹಗಳು ಪ್ರಾಣ ಕಳೆದುಕೊಂಡ ಅಪರೂಪದ ಘಟನೆ ಚಿಲಿಯ ಮೃಗಾಲಯವೊಂದರಲ್ಲಿ ನಡೆದಿದೆ.

 20ರ ಹರೆಯುದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಸಿಂಹಗಳಿರುವ ಬೋನಿನ ಆವರಣಕ್ಕೆ ಪ್ರವೇಶಿಸಿದ್ದ. ಬಟ್ಟೆಯನ್ನು ಕಳಚಿ, ಬೋನಿನೊಳಗೆ ಹಾರಿದ. ಅಲ್ಲಿ ನೆರೆದಿದ್ದ ಸಾವಿರಾರು ಜನರು ಮೂಕ ಪ್ರೇಕ್ಷಕರಂತೆ ಈ ದೃಶ್ಯವನ್ನು ನೋಡುತ್ತಿದ್ದರು. ಸಿಂಹದ ಕೈಗೆ ಸಿಲುಕಿದ್ದ ವ್ಯಕ್ತಿಯ ಜೀವ ಉಳಿಸಲು ಮುಂದಾದ ಮೃಗಾಲಯದ ಸಿಬ್ಬಂದಿ ಎರಡು ಸಿಂಹವನ್ನು ಗುಂಡಿಟ್ಟು ಸಾಯಿಸಿದ.

ಗಾಯಾಳು ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಲ್ಲಿ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಆತನ ಅಂಗಿಯ ಜೇಬಿನಲ್ಲಿದ್ದ ಡೆತ್ ನೋಟ್‌ನಿಂದ ಆತ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬ ಅಂಶ ಗೊತ್ತಾಗಿ ಮೃಗಾಲಯದ ಸಿಬ್ಬಂದಿ ಹೌಹಾರಿದ್ದರು.

‘‘ಜನರ ಜೀವ ನಮಗೆ ಅತ್ಯಂತ ಮುಖ್ಯವಾಗಿದ್ದರಿಂದ ಎರಡು ಸಿಂಹಗಳನ್ನು ಸಾಯಿಸಬೇಕಾಯಿತು. ವ್ಯಕ್ತಿಯನ್ನು ಸಿಂಹಗಳಿಂದ ರಕ್ಷಿಸಲು ನಮ್ಮಲ್ಲಿ ಬೇರ್ಯಾವ ಸಾಧನಗಳಿರಲಿಲ್ಲ. ಒಂದು ಹೆಣ್ಣು,ಒಂದು ಗಂಡು ಸಿಂಹವನ್ನು ಸಾಯಿಸಿದ್ದಕ್ಕೆ ತುಂಬಾ ಬೇಸರವಾಗುತ್ತಿದೆೆ. ಅವುಗಳು ಕಳೆದ 20 ವರ್ಷಗಳಿಂದ ನಮ್ಮ ಮೃಗಾಲಯದಲ್ಲಿದ್ದವು ಎಂದು ಮೃಗಾಲಯದ ನಿರ್ದೇಶಕಿ ಅಲೆಝಾಂಡ್ರ ಮಾಂಟ್ಲಾಬಾ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News