×
Ad

ಮಂಗಳೂರು: ವಸತಿಗೃಹದಲ್ಲಿ ಆತ್ಮಹತ್ಯೆ

Update: 2016-05-22 15:52 IST

  ಮಂಗಳೂರು,ಮೇ 22. ಇಂದು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ವಸತಿ ಗೃಹವೊಂದರಲ್ಲಿ ಸುಮಾರು 45 ವಷ೯ ಪ್ರಾಯದ ಶಂಭು ಜಿ.ಎಸ್. ಎಂಬ ವ್ಯಕ್ತಿಯು ತನ್ನ ಕುತ್ತಿಗೆಯನ್ನು ಕನ್ನಡಿಯ ತುಂಡಿನಿಂದ ಕತ್ತರಿಸಿಕೊಂಡು ಆತ್ಮಹತ್ಯಯನ್ನು ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

           ಕಳೆದ ಎರಡುದಿನಗಳ ಹಿಂದೆ ವಸತಿಗೃಹಕ್ಕೆ ಬಂದು ಉಳಿದುಕೊಂಡಿದ್ದು ತನ್ನ ವಿಳಾಸ ದಾವಣಗೆರೆ ಅಲ್ಲಿಯ ಸ್ವೀಟ್ ಬೇಕರಿಯೊಂದರ ಹೆಸರನ್ನು ನೀಡಿರುತ್ತಾರೆ. ಶುಕ್ರವಾರ ರಾತ್ರಿ ಹೊರಗೆ ಹೋಗಿ ಬಂದವರು ಮತ್ತೆ  ಹೊರಗೆ ಹೋಗಲಿಲ್ಲ. ಇಂದು ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆವರೆಗೂ ಬಾಗಿಲು ತೆರೆಯದ್ದರಿಂದ  ಸಂಶಯ ಗೊಂಡ ವಸತಿಗೃಹದ ಮ್ಯಾನೇಜರ ನಗರದ ಉತ್ತರ ಠಾಣೆಗೆ ದೂರು ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೋಲಿಸರು ಕೋಣೆಯ ಬಾಗಿಲನ್ನು ಮುರಿದು ನೋಡಿದಾಗ ರಕ್ತದ ಮಡುವಿನಲ್ಲಿ ಶವವನ್ನು ಕಂಡು ಮೊದಲ ಹಂತದಲ್ಲಿ ಕೊಲೆಯಾಗಿರಬಹುದೆಂದು ಎನಿಸಿದ್ದರೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಕೊಲಕುಂಕಷವಾಗಿ ಪರೀಕ್ಷೆ ಮಾಡಿದಾಗ ಕೊಲೆಯಲ್ಲ ಆತ್ಮಹತ್ಯೆ ಎಂದು ಖಚಿತ ಪಡಿಸಿಕೊಂಡು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News