×
Ad

6 ಮಂದಿ ಆರೆಸ್ಸೆಸ್ಸ್ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

Update: 2016-05-22 17:00 IST

ಕಾಸರಗೋಡು,ಮೇ 22:  ಚುನಾವಣಾ ವಿಜಯೋತ್ಸವ ಸಂದರ್ಭದಲ್ಲಿ  ಕಾನ್ಚಾನ್ಗಾಡ್ ಶಾಸಕ ಇ. ಚಂದ್ರಶೇಖರನ್  ರವರ ಮೇಲೆ  ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ   ಆರು ಮಂದಿಯನ್ನು   ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು  ಮಾವುಂಗಾಲ್  ಮೇಲನಡ್ಕದ  ಬಾಲರಾಮ ( 24) ,  ಆಟೋ ಚಾಲಕ ಎಂ . ರಾಜೇಶ್ ( 30),  ಎಸ್. ಸುಧೀಶ್ ( 24) ,  ಅಜನೂರು ಕಾಟ ಕುಳ೦ಗರದ  ಬಾಬು ( 47), ರಾಹುಲ್ ( 18) ಎಂ . ಅರುಣ್ (೧೮) ಎಂದು ಗುರುತಿಸಲಾಗಿದೆ.

ಬಂಧಿತರು  ಆರ್ ಎಸ್ ಎಸ್ ಕಾರ್ಯಕರ್ತರೆಂದು ಪೊಲೀಸರು ತಿಳಿಸಿದ್ದಾರೆ.

ಮೇ 19 ರಂದು ಸಂಜೆ ಘಟನೆ ನಡೆದಿತ್ತು . ಕಾನ್ಚಾನ್ಗಾಡ್ ವಿಧಾನಸಭಾ ಕ್ಷೇತ್ರದಿಂದ ಎಲ್ ಡಿ ಎಫ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಇ . ಚಂದ್ರಶೇಖರನ್ ರವರ ವಿಜಯೋತ್ಸವ  ಮೆರವಣಿಗೆ ಸಂದರ್ಭದಲ್ಲಿ  ಗುಂಪೊಂದು ಅಡ್ಡಿ ಪಡಿಸಿ   ಕಲ್ಲು ಹಾಗೂ ಇನ್ನಿತರ ವಸ್ತುಗಳನ್ನು  ಎಸೆದಿದ್ದ ಕಾರಣ ವಿಜಯೋತ್ಸವ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ   ಕಾನ್ಚಾನ್ಗಾಡ್ ಶಾಸಕ ಇ. ಚಂದ್ರಶೇಖರನ್ , ಮುಖಂಡರಾದ ಎ . ಕೆ. ನಾರಾಯಣನ್ , ಟಿ. ಕೆ ರವಿ , ಕೆ . ವಿ ಕೃಷ್ಣನ್  ಗಾಯಗೊಂಡಿದ್ದರು. ಶಾಸಕ ಇ . ಚಂದ್ರಶೇಖರನ್ ರವರ ಕೈ ಗೆ  ತೀವ್ರ ಸ್ವರೂಪದ ಗಾಯವಾಗಿತ್ತು.   ಮಾವುಂಗಾಲ್ ಜಂಕ್ಷನ್ ಬಳಿ ಪೊಲೀಸರು ಅಳವಡಿಸಿದ್ದ  ಕ್ಯಾಮಾರದ  ದ್ರಶ್ಯ ಗಳ ಮೂಲಕ ಆರೋಪಿಗಳ ಗುರುತು ಪತ್ತೆ ಹಚ್ಚುವಲ್ಲಿ   ಯಶಸ್ವಿಯಾಗಿದ್ದು , ಇದರಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News