×
Ad

ಅಲ್ ಅಝಾರಿಯಾ ಮದರಸ 89ನೇ ವಾರ್ಷಿಕ ಹಾಗೂ ಸನದುದಾನ ಕಾರ್ಯಕ್ರಮ

Update: 2016-05-22 18:55 IST

ಅಲ್ ಅಝಾರಿಯಾ ಮದರಸ 89ನೇ ವಾರ್ಷಿಕ ಹಾಗೂ ಸನದುದಾನ ಕಾರ್ಯಕ್ರಮದ  ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೆರವೇರಿಸಿದರು.

ದುಆ ಹಾಗೂ ಅಝಾರಿಯಾ ದರ್ಸ್ ನಲ್ಲಿ ಕಳಿತ ನಾಲ್ಕು ವಿದ್ಯಾರ್ಥಿಗಳಿಗೆ ಸನದುದಾನ ನೆರವೇರಸಿದ ಅಸ್ಸಯ್ಯದ್ ಆಟಕೋಯ ತಂಗಳ್ ಕುಂಬೋಳ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಅಝಾರಿಯಾ ಮದರಸದ ಅದ್ಯಕ್ಷರಾದ ಜನಾಬ್ ವೈ ಮುಹಮ್ಮದ್ ಕುಂಞಿ ವಹಿಸಿದರು.

ಸ್ವಾಗತವನ್ನು ಅಝಾರಿಯಾ ಮದರಸ ಉಪಾದ್ಯಕ್ಷರಾದ ಜನಾಬ್ ಎಸ್.ಎಂ.ರಶೀದ್ ಹಾಜೀ ನೆರವೇರಿಸಿ ಹಾಗೂ
89ವರ್ಷಗಳ ಇತಿಹಾಸವಿರುವ ಮಂಗಳೂರಿನ ಪ್ರಥಮ ಮದರಸ ಎಂದೇ ಪ್ರಖ್ಯಾತಿಯನ್ನು ಪಡೆದ ಮದರಸದಲ್ಲಿ 700 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಉಚಿತವಾಗಿ ವ್ಯಾಸಾಂಗಮಾಡುತ್ತಿದ್ದಾರೆ.
ಅದಲ್ಲದೆ ಅಝರಿಯಾ ಮದರಸದ ಅಧೀನದಲ್ಲಿ ಎರಡು ಮದರಸಗಳು ಕಾರ್ಯಚರಿಸುತ್ತಿದೆ. ಹಾಗೂ 25 ಮುತಅಲ್ಲಿಂ ಗಳು ದರ್ಸ್ ನಲ್ಲಿ ಉಚಿತವಾಗಿ ವ್ಯಾಸಾಂಗಮಾಡುತ್ತಿದ್ದಾರೆಂದು ಎಸ್.ಎಂ.ರಶೀದ್ ಹಾಜಿಯವರು ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.

ಮುದರ್ರಿಸ್ ಹೈದರ್ ಮದನಿ,ಅಝರಿಯಾ ಮದರಸದ ಉಪಾದ್ಯಕ್ಷರಾದ  ಜನಾಬ್ ಕೆ.ಅಶ್ರಫ್,
ಸದರ್ ಬಶೀರ್ ಮದನಿ ಉಪಸ್ಥಿತರಿದ್ದರು.

ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News