×
Ad

ಉಳ್ಳಾಲ ಆಡಳಿತ ಮಂಡಳಿ ವಿವಾದ: ಎಸ್ .ಎಸ್. ಎಫ್ ,ಎಸ್ .ಕೆ .ಎಸ್ .ಎಸ್. ಎಫ್ ನಡುವಿನ ಭಿನ್ನಾಭಿಪ್ರಾಯವಲ್ಲ-ಯು.ಟಿ.ಖಾದರ್

Update: 2016-05-22 19:01 IST

  ಮಂಗಳೂರು, ಮೇ 22;ಉಳ್ಳಾಲ ದರ್ಗಾ ಆಡಳಿತ ಮಂಡಳಿಯ ವಿಚಾರದಲ್ಲಿ ಉದ್ಭವಿಸಿರುವ ಭಿನ್ನಾಭಿಪ್ರಾಯ ಎಸ್ ಎಸ್ ಎಫ್ , ಎಸ್ ಕೆ ಎಸ್ ಎಸ್ ಎಫ್ ನಡುವೆ ಉದ್ಭವಿಸಿದಲ್ಲ. ಅಲ್ಲಿಗೆ ಆಡಳಿತಾಧಿಕಾರಿಯನ್ನು ನೇಮಕಗೊಳಿಸುವುದು ಕೂಡ ಅಂತಿಮ ಪರಿಹಾರವಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.

   ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಎಸ್ ಎಸ್ ಎಫ್ , ಎಸ್ ಕೆ ಎಸ್ ಎಸ್ ಎಫ್ ಸಮಾಜದ ಎರಡು ಕಣ್ಣುಗಳಿದ್ದಂತೆ. ಅವರ ನಡುವೆ ಉದ್ಭವಿಸಿರುವ ಭಿನ್ನಾಭಿಪ್ರಾಯದಿಂದ ಈ ಸಮಸ್ಯೆ ಉದ್ಭವಿಸಿಲ್ಲ. ಉಳ್ಳಾಲ ದರ್ಗಾ ಆಡಳಿತ ಮಂಡಳಿಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಉಂಟಾದ ತಾಂತ್ರಿಕ ಭಿನ್ನಾಭಿಪ್ರಾಯದಿಂದ ಈ ಸಮಸ್ಯೆ ಉದ್ಭವಿಸಿದೆ. ಈ ಸಮಸ್ಯೆ ಶೀಘ್ರ ಬಗೆಹರಿಯುವ ವಿಶ್ವಾಸವಿದೆ. ರಾಜಕೀಯ, ಧಾರ್ಮಿಕ ಮುಖಂಡರುಗಳು ಈ ಭಿನ್ನಾಭಿಪ್ರಾಯವನ್ನು ದೂರ ಮಾಡುವ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು.

ಉಳ್ಳಾಲ ದರ್ಗಾಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವುದು ಅಂತಿಮ ಪರಿಹಾರವಲ್ಲ. ಇದನ್ನು ಧಾರ್ಮಿಕ ಮುಖಂಡರುಗಳು ಬಗೆಹರಿಸುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News