×
Ad

ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು: ಅಧ್ಯಕ್ಷರಾಗಿ ಜವಾದ್ ಆಯ್ಕೆ

Update: 2016-05-22 19:14 IST

ಮುಲ್ಕಿ, ಮೇ 22: ಸಮಸ್ತ ಕೆರಳ ಜಂಯಿಯತುಲ್ ಉಲಮಾ ಇದರ ವಿದ್ಯಾರ್ಥಿ ಸಂಘಟನೆ ಎಸ್ಕೆಸ್ಸೆಸ್ಸೆಫ್ ಕೊಲ್ನಾಡು ಯೂನಿಟ್‌ನ ವಾರ್ಷಿಕ ಮಹಾಸಭೆ ಗೌರವಾಧ್ಯಕ್ಷರಾದ ಎಂ.ಎಂ. ಬಾವಾ ಅವರ ಅಧ್ಯಕ್ಷತೆಯಲ್ಲಿ ಆದಿತ್ಯವಾರ ನಡೆಯಿತು.
ಸಭೆಯಲ್ಲಿ 2016-17ನೆ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಮುಹಮ್ಮದ್ ಜವಾದ್ , ಉಪಾಧ್ಯಕ್ಷರಾಗಿ ಶರೀಫ್, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ಕಬೀರ್, ಜೊತೆ ಕಾರ್ಯದರ್ಶಿಗಳಾಗಿ ಎಂ.ಇಸ್ಮಾಯೀಲ್ ಕೊಲ್ನಾಡು, ಶಹೀರ್‌ಮೋನು, ಕೋಶಾಧಿಕಾರಿಯಾಗಿ ಹಮೀದ್ ಎನ್‌ಎಂಪಿಟಿ ಹಾಗೂ ಸಂಚಾಲಕರಾಗಿ ಇಸ್ಮಾಯೀಲ್ ಅವರನ್ನು ಆಯ್ಕೆ ಮಾಡಲಾಯಿತು.
 ಸದಸ್ಯರಾದ ಯಾಸೀರ್ ಅರಾಫತ್ ಸ್ವಾಗತಿಸಿದರು. ಅಹ್ಮದ್ ಕಬೀರ್ ಎಕೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News