ಕೋಬೆ ಸಿಸ್ಲರ್ಸ್ ರೆಸ್ಟೋರೆಂಟ್ ಶುಭಾರಂಭ
Update: 2016-05-22 20:01 IST
ಮಂಗಳೂರು, ಮೇ 21: ನಗರದ ಬಲ್ಮಠ ವೃತ್ತ ಬಳಿಯ ಪರಿನ್ ಟವರ್‌ನಲ್ಲಿನ ನೂತನ ಕೋಬೆ ಸಿಸ್ಲರ್ಸ್ ರೆಸ್ಟೋರೆಂಟ್ ಇಂದು ಶುಭಾರಂಘಗೊಂಡಿತು.
ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ನೂತನ ರೆಸ್ಟೋರೆಂಟ್‌ನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಶಾಸಕ ಜೆ.ಆರ್.ಲೊಬೋ ಅವರು ಅಡುಗೆ ಕೋಣೆಯ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್, ಡಾ. ನಿಲನ್ ಶೆಟ್ಟಿ, ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್ನರ್ ಹಾರಿಸ್ ಇಬ್ರಾಹೀಂ, ಪಾಲುದಾರರಾದ ಕಿರಣ್ ಕುಮಾರ್, ವಸೀಂ ಮತ್ತು ಬಿಗ್ ಸಿಟಿ ಟ್ರೇಡಿಂಗ್ ಪ್ರೈ.ಲಿ.ನ ಡೇವಿಡ್ ಜೋಸೆಫ್ ಉಪಸ್ಥಿತರಿದ್ದರು.