ಮಣಿಪಾಲ: ಅಂತರ್ ಜಿಲ್ಲಾ ಮಟ್ಟದ ರ್ಯಾಪಿಡ್ ಚೆಸ್ ಪಂದ್ಯಕೂಟ

Update: 2016-05-22 15:06 GMT

ಮಣಿಪಾಲ, ಮೇ 22: ಈಶ್ವರನಗರದ ಸ್ನೇಹ ಸಂಗಮ ಮತ್ತು ಉಡುಪಿ ಜಿಲ್ಲಾ ಚೆಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಅಂತರ್ ಜಿಲ್ಲಾ ಮಟ್ಟದ ರ್ಯಾಪಿಡ್ ಚೆಸ್ ಪಂದ್ಯಕೂಟವನ್ನು ಮಣಿಪಾಲದ ಡಾ.ಟಿ.ಎಂ.ಎ.ಪಾಲಿ ಟೆಕ್ನಿಕ್ ಸಂಸ್ಥೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು. 

ಪಂದ್ಯಾಟವನ್ನು ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿ, ಬುದ್ದಿವಂತರ ಜಿಲ್ಲೆ ಎನಿಸಿರುವ ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಬುದ್ಧಿವಂತಿಕೆ ಆಟವಾದ ಚದುರಂಗವು ಅಷ್ಟೊಂದು ಬೆಳವಣಿಗೆ ಕಂಡಿಲ್ಲ. ಆ ನಿಟ್ಟಿನಲ್ಲಿ ಚದುರಂಗದಾಟಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ಚದು ರಂಗ ತರಬೇತಿ, ತರಬೇತಿ ಪಡೆದವರಿಗೆ ಪಂದ್ಯಗಳನ್ನಾಡುವ ಅವಕಾಶವನ್ನು ಕಲ್ಪಿಸುವ ಕಾರ್ಯ ಆಗಬೇಕು ಎಂದರು. ವೈದ್ಯೆ ಡಾ.ಎಚ್.ಜೆ.ಗೌರಿ ಮಾತನಾಡಿ, ಚೆಸ್ ಆಟದ ವೇಳೆ ನಡೆಯುವ ಮಿದುಳಿನ ಕ್ರಿಯೆ, ಚೆಸ್ ಆಟ ಮತ್ತು ನಮ್ಮ ಬದುಕಿನ ಆಟಕ್ಕೂ ನೇರ ಸಂಬಂಧ ಇದೆ. ಚೆಸ್ ಆಟದಲ್ಲಿನ ವಿವೇಚನಾ ಪೂರ್ಣ ನಡೆಗಳು ನಮ್ಮ ಬದುಕಿನ ಯಶಸ್ವಿ ನಡೆಗಳನ್ನಿಡಲು ಸಹಾಯಕವಾಗಿದ್ದು ಯಶಸ್ವಿ ಬದುಕಿಗೆ ಹೇತುವಾಗಬಲ್ಲದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರ ಸಭಾಸದಸ್ಯ ಮಹೇಶ್ ಠಾಕೂರ್, ಎಚ್.ಎನ್.ಎಸ್.ರಾವ್ ಉಪಸ್ಥಿತರಿದ್ದರು.

 ಸಮಾರೋಪ ಸಮಾರಂಭದಲ್ಲಿ ಪ್ರಕಾಶ್ ನಾಯಕ್, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶ್‌ನ ಅಧ್ಯಕ್ಷ ಡಾ.ರಾಜ್‌ಗೋಪಾಲ್ ಶೆಣೈ, ಉಮಾ ನಾಥ ಕಾಪು, ಸ್ನೇಹ ಸಂಗಮದ ಉಪಾಧ್ಯಕ್ಷ ಪ್ರಭಾಕರ ಶೆಣೈ, ಮುಖ್ಯ ತೀರ್ಪುಗಾರ ಬಾಬು ಪೂಜಾರಿ ಉಪಸ್ಥಿತರಿದ್ದರು. ಅಂತಾರಾಷ್ಟ್ರೀಯ ಚೆಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಹೊನ್ನಾ ವರದ ವಿಶೇಷ ಚೇತನ ಸಮರ್ಥ್‌ನನ್ನು ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಹರೀಶ್ ಕಲ್ಮಾಡಿ ಸ್ವಾಗತಿಸಿದರು, ನಾಗರಾಜ್ ವಂದಿಸಿದರು. ಮಂಜುನಾಥ ಮಣಿಪಾಲ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶದ ವಿವರ ಈ ರೀತಿ ಇದೆ. ಮುಕ್ತ ವಿಭಾಗ: 1.ಶರಣ ರಾವ್, 2.ಮನೀಶ್ ಶೇರಿಗಾರ್, 3.ನಿಖಿಲೇಶ್ ಹೊಳ್ಳ. 7 ವರ್ಷಕ್ಕಿಂತ ಕೆಳಗಿನ ಬಾಲಕಿಯರು: 1.ಸ್ಮತಿ ಭಟ್, 2.ಅಲಿನಾ. ಬಾಲಕರು: 1.ರಾಮ್ ಶೆಟ್ಟಿ, 2.ಆರ್ಯನ್ ಸೂರ್ಯ, 3.ಪ್ರಣವ್ ರಾವ್. 9ವರ್ಷ ಕೆಳಗಿನ ಬಾಲಕರು: 1.ಪ್ರಥಮ್, 2.ಅದ್ವೈತ್, 3.ಷಣ್ಮುಖ. ಬಾಲಕಿಯರು: 1.ಯಶಸ್ವಿ ಪೂಜಾರಿ, 2.ಗೌತಮಿ, 3.ಮೆದ್ನಾ ಭಟ್. 11 ವರ್ಷ ಕೆಳಗಿನ ಬಾಲಕಿಯರು: 1.ಸಾನ್ವಿ ರಾವ್, 2.ವೈಭವಿ, 3.ಓಜಸ್ವಿ. ಬಾಲಕರು: 1.ಸುಮುಖ ನಾಯಕ್, 2.ವಿದ್ವತ್ ಕಾರಂತ್, 3.ತನ್ಮಯಿ. 13 ವರ್ಷ ಕೆಳಗಿನ ಬಾಲಕಿಯರು: 1.ಅನನ್ಯ, 2.ಅಖಿಲ, 3.ರಕ್ಷಾ. ಬಾಲಕರು: 1.ಸಿದ್ದಾಂತ್, 2.ಪ್ರಜ್ವಲ್, 3.ಅರ್ಜುನ್. 14ವರ್ಷ ಕೆಳಗಿನ ಬಾಲಕಿಯರು: 1.ಭೂಮಿಕಾ, 2.ಸೌಜನ್ಯ, 3.ಸ್ವಾತಿ ಭಟ್. ಬಾಲಕರು: 1.ಮಿಹಿರ್, 2. ಅಜಯ ಕೃಷ್ಣ, 3.ಸುಮುಖ್ ರಾವ್. ಉತ್ತಮ ಹಿರಿಯ ದುರಂಗ ಪಟು: ರಾಮ ಶೇರಿಗಾರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News