×
Ad

ಮಂಗಳೂರು: ಕಾಳಸಂತೆಯಲ್ಲಿ ರೈಲ್ವೆ ಟಿಕೆಟ್ ಮಾರಾಟ; ಮೂವರ ಬಂಧನ

Update: 2016-05-22 22:13 IST

ಮಂಗಳೂರು, ಮೇ 22: ಕಾಳಸಂತೆಯಲ್ಲಿ ರೈಲ್ವೆ ಟಿಕೆಟ್‌ಗಳನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ಮೂವರನ್ನು ಆರ್‌ಪಿಎಫ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನಗರದ ಚಿಲಿಂಬಿ ಪುರುಷೋತ್ತಮ ನಿವಾಸದ ಕಿರಣ್ ಜೆ. ಭಟ್ (35), ಕಂಕನಾಡಿ ವೆಲೆನ್ಶಿಯಾದ ನಿವಾಸಿ ಉಮೇಶ್ (41) ಮತ್ತು ಕೆಂಜಾರು ಗುಂಡೊಟ್ಟು ಹೌಸ್ ನಿವಾಸಿ ರವಿ ರಾಜೇಂದ್ರ ಶೆಟ್ಟಿ (30) ಎಂದು ಗುರುತಿಸಲಾಗಿದೆ.

ಆರೋಪಿಗಳು ಶನಿವಾರ ಬೆಳಗ್ಗೆ ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ಪಡೆಯಲೆಂದು ರಿಸರ್ವೇಶನ್ ಕೌಂಟರ್‌ನ ಸರದಿ ಸಾಲಿನಲ್ಲಿ ನಿಂತಿದ್ದರು. ಮೂವರು ಕೂಡ ತತ್ಕಾಲದಲ್ಲಿ ಟಿಕೆಟ್‌ಗಳನ್ನು ಕಾದಿರಿಸಿ ಅಲ್ಲೇ ಕೆಲವರನ್ನುದಿಂದ ಸಂಪರ್ಕಿಸಿ ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಆರೋಪಿಗಳ ಚಲನವಲನದಿಂದ ಅನುಮಾನಗೊಂಡ ಆರ್‌ಪಿಎಫ್ ಎಸ್‌ಐ ಭರತ್‌ರಾಜ್ ಮತ್ತು ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಾಳಸಂತೆಯಲ್ಲಿ ಮಾರಾಟ ಮಾಡಲು ಟಿಕೆಟ್‌ಗಳನ್ನು ಪಡೆದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪೊಲೀಸರು ಆರೋಪಿಗಳಾದ ಕಿರಣ್ ಭಟ್‌ನಿಂದ 8655 ರೂ., ಉಮೇಶ್‌ನಿಂದ 4,960ರೂ. ಹಾಗೂ ರವಿರಾಜೇಂದ್ರನಿಂದ 7,320 ರೂ. ಬೆಲೆಯ 20,935 ವೌಲ್ಯದ ಟಿಕೆಟ್‌ಗಳನ್ನು ವಶಕ್ಕೆ ಪಡೆದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಋಆ್ಯಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News