×
Ad

ಕೆ ಸಿ ಸಿ ಆರೋಗ್ಯ ಕಾರ್ಡ್ ನೋಂದಾವಣೆ, ಮಾಹಿತಿ ಶಿಬಿರ

Update: 2016-05-23 12:10 IST

ಸಂಪ್ಯ, ಮೇ 23: ಕೆ ಸಿ ಸಿ ಆರೋಗ್ಯ ಕಾರ್ಡ್ ನೋಂದಾವಣೆ ಮತು ಮಾಹಿತಿ ಶಿಬಿರ ಎಸ್ ಡಿ ಪಿ ಐ ಸಂಪ್ಯ ವಲಯದ ವತಿಯಿಂದ ಆರ್ಯಾಪು ಪಂಚಾಯತ್ ಮುಂಭಾಗದಲ್ಲಿ  ಇತ್ತೀಚೆಗೆ ನಡೆಯಿತು.

ಉದ್ಘಾಟನೆಯನ್ನು ಎಸ್ ಡಿ ಪಿ ಐ ಪುತ್ತೂರು ವಿಧಾನ ಸಭಾದ್ಯಕ್ಷ ಕೆ ಎ ಸಿದ್ದೀಕ್ ನೇರವೇರಿಸೀದರು. 
ಮುಖ್ಯ ಅತಿಥಿಗಳಾಗಿ ಎಸ್ ಕೆ ಎಸ್ ಎಸ್ ಎಫ್ ಸಂಪ್ಯ ಘಟಕಾದ್ಯಕ್ಷ ಅಬ್ದುಲ್ ಅಝೀಝ್ ಎಸ್ ಎಂ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕುಂಬ್ರ ಡಿವಿಷನ್ ಕಾರ್ಯದರ್ಶಿ ಅಝೀಝ್ ಸಂಪ್ಯ, ಪಿ ಎಫ್ ಐ ಸಂಪ್ಯ ವಲಯಾದ್ಯಕ್ಷ ಇಬ್ರಾಹಿಂ ಕೆ ಎಂ, ಹಾಗು ವಲಯ ಕಾರ್ಯದರ್ಶಿ ರಿಯಾಝ್ ಬಳಕ್ಕ ಉಪಸ್ಥಿತರಿದ್ದರು.

ಈ ಸಂದರ್ಭದಲಿ ಕೆ ಸಿ  ಸಿ ವ್ಯವಸ್ಥಾಪಕ ಅಬ್ದುಲ್ ರಹಿಮಾನ್ ಮಾಹಿತಿ ನೀಡಿ, ಕೆ.ಸಿ.ಸಿ ಆರೋಗ್ಯ ಕಾರ್ಡ್ ಹೊಂದಿದವರಿಗೆ ಕಣಚೂರು ಆಸ್ಪತ್ರೆ ದೆರಳಕಟ್ಟೆ, 
ಫಾದರ್ ಮುಲರ್ ಆಸ್ಪತ್ರೆ ಕಂಕನಾಡಿ, K.S. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, k.m.c ಆಸ್ಪತ್ರೆ ಅತ್ತಾವರ, K.m.c ಆಸ್ಪತ್ರೆ ಜ್ಯೋತಿ, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ, ಸಹಾರ ಆಸ್ಪತ್ರೆ ತೊಕೊಟ್ಟು, ಓಂ ಕೊಲಜಿ ಆಸ್ಪತ್ರೆ ಪಂಪ್ ವೆಲ್ ಮಂಗಳೂರು 
ಹೈಲಾಂಡ್ ಆಸ್ಪತ್ರೆ ಮಂಗಳೂರು, ಸಿ.ಟಿ.ಆಸ್ಪತ್ರೆ ಮಂಗಳೂರು, ಪರ್ಲಿಯಾ ನರ್ಸಿಂಗ್ ಹೋಂ.ಬಿ.ಸಿ.ರೋಡ್, ಎ.ಜೆ.ಆಸ್ಪತ್ರೆ  ಕುಂಟಿಕಾನಾ, ಕಯರ್ ಕೇರ್ ಆಸ್ಪತ್ರೆ ಮುಡಿಫು ಈ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಮತು ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭಿಸಲಿದೆ ಎಂದರು.

ಈ ಶಿಬಿರಕ್ಕೆ ಎಸ್ ಡಿ ಪಿ ಐ ಜಿಲ್ಲಾದ್ಯಕ್ಷ ಹನೀಫ್ ಖಾನ್ ಕೋಡಾಜೆ, ಪಿ ಎಫ್ ಐ ಪುತ್ತೂರು ಜಿಲ್ಲಾ ಅಧ್ಯಕ್ಷ ಸಂಶುದ್ದೀನ್ ಈಶ್ವರಮಂಗಲ,  ಹಾಗು ಮುಖಂಡರಾದ ಅಝೀಝ್ ಕಬಕ, ನವಾಝ್ ಉಳ್ಳಾಲ್, ಜಾಬಿರ್ ಅರಿಯಡ್ಕ, ಇಕ್ಬಾಲ್ ಬೆಳ್ಳಾರೆ, ಭೇಟಿ ನೀಡಿದರು.

ಕೆ ಸಿ ಸಿ ಆರೋಗ್ಯ ಕಾರ್ಡ್ ಸಂಯೋಜಕರಾದ ವಾಸಿಂ ಉರಿಮಜಲ್, ಇಸ್ಮಾಯಿಲ್ ಸಂತರಬೈಲ್, ನೌಫಾಲ್ ಪೇರಮುಗೆರು ಈ  ಕಾರ್ಯಕ್ರಮ ನೆರವೇರಿಸಿ ಕೊಟ್ಟರು.
ಈ ಕಾರ್ಯಕ್ರಮವನ್ನು ಎಸ್ ಡಿ ಪಿ ಐ ಸಂಪ್ಯ ಘಟಕದ ಕಾರ್ಯದರ್ಶಿ ಬಷೀರ್ ವಾಗ್ಲೆ ಸ್ವಾಗತಿಸಿ, ಸಾಬಿತ್ ಅಜ್ಜಿಕಲ್ಲು ಸಂಪ್ಯ ವಂದಿಸಿ, ಅಝೀಝ್ ಕಲ್ಲರ್ಪೆ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News