×
Ad

ಶಿವಾನಂದ ಎಸ್. ಪಾಂಡ್ರುರಿಗೆ ಕಾರ್ಮಿಕ ರತ್ನ ಪ್ರಶಸ್ತಿ

Update: 2016-05-23 17:54 IST

ಮೂಡುಬಿದಿರೆ, ಮೇ 23: ಕರ್ನಾಟಕ ಸರಕಾರದ ದೇವರಾಜ ಅರಸು ಟ್ರಕ್ ಟರ್ಮಿನಲ್ ಮಂಡಳಿ ವತಿಯಿಂದ ಪ್ರತಿ ವರ್ಷ ಕಾರ್ಮಿಕ ದಿನಾಚರಣೆಯಂದು ನೀಡಲಾಗುವ ಕಾರ್ಮಿಕ ರತ್ನ ಪ್ರಶಸ್ತಿಯನ್ನು ಮೂಡುಬಿದಿರೆ ಅಳಿಯೂರಿನ ಶಿವಾನಂದ ಎಸ್.ಪಾಂಡ್ರುರಿಗೆ ಸ್ವಗೃಹದಲ್ಲಿ ನೀಡಲಾಯಿತು.

ಪಾಂಡ್ರು ಕಳೆದ 1 ದಶಕಕ್ಕೂ ಹೆಚ್ಚು ಕಾಲ ಸಮಾಜಸೇವೆ ಹಾಗೂ ಕಾರ್ಮಿಕ ಶ್ರೇಯೋಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಈ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬೆಂಗಳೂರಿನ ಯಶವಂತಪುರ ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ ಮೇ 1ರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಶಸ್ತಿಯನ್ನು ಪ್ರದಾನ ಮಾಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ ತುರ್ತು ಕಾರ್ಯಕ್ರಮದ ನಿಮಿತ್ತ ಶಿವಾನಂದ ಎಸ್. ಪಾಂಡ್ರು ಬೆಂಗಳೂರಿಗೆ ತೆರಳಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗುವುದು ಸಾಧ್ಯವಾಗಿರಲಿಲ್ಲ.

ಈ ಸಂದರ್ಭ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶೈಲೇಶ್ ಸುವರ್ಣ, ರುಕ್ಕಯ್ಯ ಪೂಜಾರಿ, ಬೆಂಗಳೂರು ನಗರ ಕಾಂಗ್ರೆಸ್ ಮುಖಂಡರಾದ ಪಿಳ್ಳೈ ರಾಜು, ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಪಾಧ್ಯಕ್ಷ ತಿಮ್ಮಾರೆಡ್ಡಿ, ಬೆಂಗಳೂರು ಕಾಂಗ್ರೆಸ್ ಕಾರ್ಮಿಕ ಸಂಘದ ಉಪಾಧ್ಯಕ್ಷ ಕಾವೇರಿಯಪ್ಪ, ಕಾಂಗ್ರೆಸ್ ಮುಖಂಡರಾದ ಚಿತ್ತರಂಜನ್ ಗೌಡ, ಆರ್. ರಮೇಶ್, ಪರಮೇಶ್, ಬಿಬಿಎಂಪಿ ಸದಸ್ಯ ಅಂಬರೀಶ್, ಸುಭಾಷ್‌ಚಂದ್ರ ಚೌಟ, ಲಕ್ಷ್ಮಣ ಸುವರ್ಣ, ನಂದೊಟ್ಟು ಅರಮನೆ ಯುವರಾಜ ಹೆಗ್ಡೆ, ಸುಂದರ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News