ಫೆಲೆಸ್ತೀನಿಯರು ನನ್ನನ್ನು ಫೋಟೊಗ್ರಾಫರ್ ಮಾಡಿದರು: ವಿಶ್ವಪ್ರಸಿದ್ಧ ಛಾಯಾಚಿತ್ರಕಾರ ರಿಯೂಚಿ ಹಿರೊಕವ
ಜೆರುಸಲೇಂ,ಮೇ 23: ರಿಯೂಚಿ ಹಿರೋಕವ ಪ್ರಸಿದ್ಧ ಜಪಾನಿ ಛಾಯಾಚಿತ್ರಕಾರನ ಹೆಸರು. 2009ರಲ್ಲಿ ಗಾರದಲ್ಲಿ ತೆಗೆದ ಫೆಲೆಸ್ತೀನಿ ಹೆಣ್ಣುಮಕ್ಕಳ ಚಿತ್ರದ ಹತ್ತಿರ ನಿಂತು ಈ ಜನತೆ ತನ್ನನ್ನು ಫೋಟೊಗ್ರಾಫರ್ ಮಾಡಿದ್ದು ಎಂದು ಅವರು ಹೇಳಿದರು. ಅನಾಥವಾದ ಸ್ಥಳಗಳ ದೃಶ್ಯಗಳನ್ನು ಸೆರೆಹಿಡಿಯುವುದು ಅವರಿಗೆ ಬಾಲ್ಯದಲ್ಲಿದ್ದ ಅಭ್ಯಾಸವಾಗಿತ್ತು. ಫೆಲೆಸ್ತೀನ್‌ನ ರಕ್ತಕೋಡಿಹರಿಯುವ ಕಣ್ಣೀರಿನಕಥೆಗಳು ಹಿರೋಕವರ ಕಿವಿಗೂ ಬಿದ್ದಿತ್ತು. ಟ948ರಲ್ಲಿ ಫೆಲೆಸ್ತೀನ್‌ನ ಪ್ರಧಾನ ನಗರಗಳು ಮತ್ತು 530ಕ್ಕೂ ಹೆಚ್ಚು ಗ್ರಾಮಗಳನ್ನು ಅತಿಕ್ರಮಿಸಿ ಇಸ್ರೇಲ್ ಸ್ಥಾಪನೆಯಾದ ಕತೆ ಹಿರಕವರ ಮನಸ್ಸಿಗೆ ನಾಟಿತ್ತು.
ದಾರುಣ ದುರಂತಗಳಲ್ಲಿ ಬದುಕು ದೂಡುತ್ತಿರುವ ಫೆಲೆಸ್ತೀನಿಯರ ಕುರಿತು ಅಧ್ಯಯನ ನಡೆಸಲು ಅವರ ಜೀವನವನ್ನು ಮೀಸಲಾಗಿಟ್ಟರು. ಇಸ್ರೇಲ್ ಮತ್ತು ಫೆಲೆಸ್ತೀನ್‌ನ ನಗರಗಳನ್ನು ಸುತ್ತಾಡಿದರು. ಅದರ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಿದರು. ಇಸ್ರೇಲ್‌ನ ಅತಿಕ್ರಮಣ ವಿರೋಧಿ ರ್ಯಾಲಿಗಳಲ್ಲಿ ಸದಾ ಉಪಸ್ಥಿತರಾದರು. ಇಸ್ರೇಲ್ ಧ್ವಂಸಗೈದ 500ಫೆಲೆಸ್ತೀನಿ ಗ್ರಾಮಗಳ ಕುರಿತು ಅಧ್ಯಯನ ನಡೆಸಿ ಡಾಕ್ಯುಮೆಂಟರಿ ತಯಾರಿಸಿದರು.
1982ರ ನವೆಂಬರ್‌ನಲ್ಲಿ ಸಬ್ರರದ ಶಾತಿಲದಲ್ಲಿ ನಿರಾಶ್ರಿತರ ಕ್ಯಾಂಪ್‌ಗಳ ಮೇಲೆ ಏರಿಯಲ್ ಶಾರೋನ್ ನೇತೃತ್ವದ ಇಸ್ರೇಲ್ ಸೇನೆ ದಾಳಿ ನಡೆಸಿ ಭಯಾನಕ ಸಾಮೂಹಿಕ ಹತ್ಯೆ ನಡೆಸಿತ್ತು. ಹರೋಕವ ಲೆಬನಾನ್‌ನಲ್ಲಿದ್ದರು. ಗಲಭೆಯ ಒಂದು ತಿಂಗಳ ನಂತರ ಅಲ್ಲಿಗೆ ಹೋದಾಗ ಒಬ್ಬ ಮುದುಕ ಯಾಕೆ ಇಲ್ಲಿಗೆ ಬಂದಿರಿ ಎಂದು ಪ್ರಶ್ನಿಸಿದ್ದರು. ಒಂದು ತಿಂಗಳು ಮುಂಚೆ ಬಂದಿದ್ದರೆ ಅವರು ತನ್ನ ಮಗನನ್ನು ಕೊಲ್ಲುತ್ತಿರಲಿಲ್ಲ ಅವರಿಗೆ ಹಾಗೆ ಮಾಡಲು ಸಾಧ್ಯವಿರಲಿಲ್ಲ ಎಂದು ಮುದುಕ ಪತ್ರಕರ್ತನ ಮುಂದೆ ಅಳತೊಡಗಿದ್ದ. ಇಲ್ಲಿಂದ ಹೋಗಬಾರದು ಎಂದು ಹಿರೋಕವರ ಮನಸ್ಸು ಹೇಳುತ್ತಿತ್ತು. ಇಸ್ರೇಲ್ ಮುಚ್ಚಿದ್ದ ನಿರಾಶ್ರಿತರ ಕ್ಯಾಂಪ್‌ಗಳು ತೆರೆದಾಗ ಮೃತಶರೀರಗಳು ರಾಶಿಹಾಕಿರುವುದು ಕಂಡು ಬಂದಿತ್ತು. ಆ ಭಯಾನಕ ದೃಶ್ಯ ವನ್ನು ಹಿರೋಕವ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದರು. ಅವರ ಕಥೆಗಳನ್ನು ಜಗತ್ತಿಗೆ ತಿಳಿಸಿದರು. ಬಲಿಪಶುಗಳ ಕುಟುಂಬಗಳನ್ನು ಕಂಡುಹುಡುಕಿದರು. ಫೆಲೆಸ್ತೀನ್ ನಿರಾಶ್ರಿತರ ಮಕ್ಕಳಿಗೆ ಜಪಾನ್‌ನ ಸ್ವಯಂಸೇವಕ ಸಂಘಟನೆಗಳಿಂದ ನೆರವು ಸಿಗುವಂತೆ ಮಾಡಲು ಅವರು ಶ್ರಮಿಸಿದರು. ಕಳೆದ ಮೂವತ್ತು ವರ್ಷಗಳಿಂದ ಈ ಪ್ರಯತ್ನವನ್ನು ಅವರು ಮುಂದುವರಿಸುತ್ತಲೇ ಇದ್ದಾರೆ.