ಚುನಾವಣಾ ಸೋಲು ಕ್ರಮ ಅಗತ್ಯ:ಶಶಿ ತರೂರ್
Update: 2016-05-23 18:05 IST
ಹೊಸದಿಲ್ಲಿ,ಮೇ 23: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಅನುಭವಿಸಿದ ಸೋಲಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಶಶಿತರೂರ್ ಆಗ್ರಹಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದೇನೆಂದು ತರೂರ್ ಹೇಳಿದ್ದಾರೆ.
ಬರೇ ಉಮ್ಮನ್ ಚಾಂಡಿಗೆ ಮಾತ್ರ ಸೋಲಿನ ಜವಾಬ್ದಾರಿಯಿರುವುದಲ್ಲ. ಅಭ್ಯರ್ಥಿಗಳ ನಿರ್ಣಯ ಮೊದಲಾದ ವಿಚಾರಗಳಲ್ಲಿ ರಮೇಶ್‌ಚೆನ್ನಿತ್ತಲ, ಸುಧೀರನ್‌ರೂ ಜವಾಬ್ದಾರರಾಗಿದ್ದಾರೆ. ಕೇರಳದ ಚುನಾವಣಾ ಸೋಲನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ಸೋನಿಯಾ ಭೇಟಿಯಾದ ನಂತರ ತರೂರ್ ಪತ್ರಿಕೆಗಳಿಗೆ ತಿಳಿಸಿದ್ದಾರೆ.