×
Ad

ಕೊಲ್ಯ ಸ್ವಾಮೀಜಿ ನಿಧನ: ಜಮಾಅತೆ ಇಸ್ಲಾಮೀ ಹಿಂದ್ ಸಂತಾಪ

Update: 2016-05-23 18:52 IST

ಮಂಗಳೂರು, ಮೇ 23: ಕೊಲ್ಯ ಮೂಕಾಂಬಿಕಾ ಮಠದ ರಮಾನಂದ ಸ್ವಾಮೀಜಿಯವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಅಧ್ಯಕ್ಷ ಮುಹಮ್ಮದ್ ಕುಂಞಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕೋಮು ಸೌಹಾರ್ದಕ್ಕಾಗಿ ಶ್ರಮಿಸಿರುವ ಮತ್ತು ಬಡವರ ಏಳಿಗೆಗಾಗಿ ಕೈಲಾದ ಸೇವೆಯನ್ನು ಸಲ್ಲಿಸಿರುವ ಕೊಲ್ಯ ಮೂಕಾಂಬಿಕ ಮಠದ ರಮಾನಂದ ಸ್ವಾಮೀಜಿಯವರು ನಾಡಿನ ವಿರಳ ಚೇತನಗಳಲ್ಲಿ ಓರ್ವರು.

ಸಾಮಾಜಿಕ ಕಳಕಳಿಯ ಧರ್ಮ ಗುರುಗಳಾಗಿ ಅವರು ಗುರುತಿಸಿಕೊಂಡಿದ್ದರು. ಸೌಹಾರ್ದ ಸಮಾಜದ ಕನಸನ್ನು ಕಂಡವರು, ಅದಕ್ಕಾಗಿ ಶ್ರಮಿಸಿದವರು. ಇಂಥವರ ನಿಧನವು ನಾಡಿನ ಸೌಹಾರ್ದತೆ ಮತ್ತು ಕೋಮು ಸಾಮರಸ್ಯಕ್ಕಾದ ಬಲುದೊಡ್ಡ ನಷ್ಟ. ಅವರ ಅನುಯಾಯಿಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ಸೃಷ್ಟಿಕರ್ತನು ಒದಗಿಸಲಿ ಎಂದು ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News