ಸುನ್ನೀ ಸಂದೇಶ ಸಂಚಿಕೆ ಬಿಡುಗಡೆ
Update: 2016-05-23 21:09 IST
ಮಂಗಳೂರು, ಮೇ 23: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡೆಮಿ ಹೊರ ತರುವ ಸುನ್ನೀ ಸಂದೇಶ ಮಾಸ ಪತ್ರಿಕೆಯನ್ನು ಇಂದು ಸೈಯದ್ ಹೈದರಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಎಚ್.ಕೆ.ಎಚ್. ಅಬ್ದುಲ್ ಕರೀಂ ಹಾಜಿ ಶಿರಶಿರವರಿಗೆ ಪ್ರತಿ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಡಾ ಬಹಾವುದ್ದೀನ್ ನದ್ವಿ, ಸೈಯದ್ ಬಾಷಾ ತಂಙಳ್, ಸಿತಾರ್ ಅಬ್ದುಲ್ ಮಜೀದ್ ಹಾಜಿ ಚೆಮ್ಮಾಡ್, ಬಾವ ಚೆಮ್ಮಾಡ್, ಮುಸ್ತಫ ಫೈಝಿ ಕಿನ್ಯ, ರಫೀಕ್ ಮಾಸ್ಟರ್ ಟ್ಯಾಲೆಂಟ್, ಮುನೀರ್ ಶಿರಶಿ, ಡಾ. ಝಹೀರ್ ಮೊದಲಾದವರು ಉಪಸ್ಥಿತರಿದ್ದರು.