ಮೂಡುಬಿದಿರೆ: ಲಿಟ್ಲ್ ಫ್ಲವರ್ ನರ್ಸರಿ ಸ್ಕೂಲ್‌ನಲ್ಲಿ ಪೋಷಕರ, ಚಿಣ್ಣರ ಸಮಾವೇಶ
ಮೂಡುಬಿದಿರೆ, ಮೇ 23: ಪೋಷಕರು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವುದರ ಜೊತೆಗೆ ಎಳವೆಯಿಂದಲೇ ಮಕ್ಕಳಲ್ಲಿ ಭಾಷಾ ಶ್ರೀಮಂತಿಕೆಯನ್ನು ಬೆಳೆಸುವುದು ಅತ್ಯಗತ್ಯವಾಗಿದೆ ಎಂದು ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಸಂತ್ ಕುಮಾರ್ ನಿಟ್ಟೆ ಹೇಳಿದರು.
ಇಲ್ಲಿನ ಗೌರಿಕೆರೆಯಲ್ಲಿರುವ ಲಿಟ್ಲ್ ಫ್ಲವರ್ ನರ್ಸರಿ ಸ್ಕೂಲ್‌ನ ವತಿಯಿಂದ ದೇವಾಡಿಗರ ಸುಧಾರಕ ಸಂಘದ ಸಭಾಂಗಣದಲ್ಲಿ ನಡೆದ ಪೋಷಕರ ಮತ್ತು ಚಿಣ್ಣರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಪ್ರಫುಲ್ಲ ಮೋಹನ್‌ದಾಸ್ ಶೆಟ್ಟಿ ಮಾತನಾಡಿ ಮಕ್ಕಳು ತಮ್ಮ ಪೋಷಕರನ್ನೇ ಹೆಚ್ಚು ಗಮನಿಸುವುದರ ಜೊತೆಗೆ ಅವರನ್ನೇ ಅನುಕರಿಸುತ್ತಾರೆ. ಹಾಗಾಗಿ ನಾವು ಮಕ್ಕಳ ಪೋಷಣೆಯಲ್ಲಿ ಬಹಳ ಜಾಗರೂಕತೆಯನ್ನು ವಹಿಸುವುದು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಪುಟಾಣಿ ಅಮರ್ತ್ಯರ ಪೋಷಕರಾದ ಅಂಬಿಕಾ ಮತ್ತು ಸುಧಾಕರ್ ದಂಪತಿಗೆ ’ಬೆಸ್ಟ್ ಔಟ್‌ಸ್ಟ್ಯಾಂಡಿಂಗ್ ಪೇರೆಂಟ್’ ಅವಾರ್ಡ್ ನೀಡಿ ಗೌರವಿಸಲಾಯಿತು.
ಶಾಲಾ ಮುಖ್ಯಸ್ಥರಾದ ಗುರುಪ್ರಸಾದ್ ಮತ್ತು ಲಕ್ಷ್ಮೀ ಗುರುಪ್ರಸಾದ್, ಶರದ್ ವಿಜಯ್, ಮುಖ್ಯ ಶಿಕ್ಷಕಿ ಜ್ಯೋತಿ ಭಟ್, ಸುರೇಖಾ ಉಪಸ್ಥಿತರಿದ್ದರು.
ನಿತೇಶ್ ಕುಮಾರ್ ಮಾರ್ನಾಡ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಶಿಕ್ಷಕಿ ಮೋಹಿನಿ ಅನಿಲ್ ದೇವಾಡಿಗ ವಂದಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಸಾಂಪ್ರದಾಯಿಕ ಅಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಗಂಡಸರಿಗೆ ಸೀರೆ ಉಟ್ಟು ಕ್ಯಾಟ್‌ವಾಕ್ ಮಾಡುವ ಸ್ಪರ್ಧೆ, ಚಕ್ಕುಲಿ ತಿನ್ನುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ ಮಾಡುವ ಸ್ಪರ್ಧೆ, ಲಿಂಬೆಹುಳಿಯನ್ನು ಬಾಯಲ್ಲಿಟ್ಟು ಹೆಸರು ಹೇಳುವ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.