×
Ad

ಕೆಪೆಕ್ ನಿರ್ದೇಶಕರಾಗಿ ಪಿ.ಎ.ಮುಹಮ್ಮದ್ ನೇಮಕ

Update: 2016-05-23 21:23 IST

ಮಂಗಳೂರು, ಮೇ 23: ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ಬೆಂಗಳೂರು(ಕೆಪೆಕ್) ಇದರ ಆಡಳಿತ ಮಂಡಳಿ ನಿರ್ದೇಶಕರಾಗಿ ಸುಳ್ಯದ ಕಾಂಗ್ರೆಸ್ ನಾಯಕ ಪಿ.ಎ. ಮುಹಮ್ಮದ್ ನೇಮಕಗೊಂಡಿದ್ದಾರೆ.

ಕೃಷಿ ಸಚಿವರು ಅಧ್ಯಕ್ಷರಾಗಿ ಈ ನಿಗಮದಲ್ಲಿ 11 ಮಂದಿ ಅಧಿಕಾರೇತರ ನಿರ್ದೇಶಕರಾಗಿರುತ್ತಾರೆ. ಪಿ.ಎ. ಮಹಮ್ಮದ್‌ರವರು ಎನ್.ಎಸ್.ಯು.ಐ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿ 3 ದಶಕಗಳಿಂದ ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಗ್ರೀನ್‌ವ್ಯೆ ಶಾಲೆಯ ಅಧ್ಯಕ್ಷರಾಗಿ, ನ.ಪಂ.ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರನ್ನು ಸಚಿವ ರಮಾನಾಥ ರೈಯವರ ಶಿಫಾರಸಿನಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಿಗಮದ ನಿರ್ದೇಶಕ ಸ್ಥಾನಕ್ಕೆ ನೇಮಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News