ಐಎಂಎಯ ಕಮಾಂಡೆಂಟಾಗಿ ಲೆ.ಜ.ಸೈನಿ ಅಧಿಕಾರಕ್ಕೆ
Update: 2016-05-23 22:46 IST
ಡೆಹ್ರಾಡೂನ್, ಮೇ 23: ಲೆ.ಜ.ಎಸ್.ಕೆ. ಸೈನಿ ಡೆಹ್ರಾಡೂನ್‌ನ ಭಾರತೀಯ ಸೈನಿಕ ಅಕಾಡಮಿಯ (ಐಎಂಎ) ಕಮಾಂಡೆಂಟ್ ಹುದ್ದೆಯನ್ನು ಮೇ 21ರಂದು ಸ್ವೀಕರಿಸಿದ್ದಾರೆ.
ಅವರು ಈ ಹಿಂದೆ ಹೊಸದಿಲ್ಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜ್‌ನಲ್ಲಿ (ಎನ್‌ಡಿಸಿ) ಹಿರಿಯ ನಿರ್ದೇಶಕ ಸಿಬ್ಬಂದಿಯಾಗಿದ್ದರೆಂದು ಐಎಂಎಯ ಪತ್ರಿಕಾ ಪ್ರಕಟನೆಯೊಂದು ತಿಳಿಸಿದೆ. ಲೆ.ಜ.ಸೈನಿ ರಾಷ್ಟ್ರೀಯ ರಕ್ಷಣಾ ಅಕಾಡಮಿ (ಎನ್‌ಡಿಎ) ಹಾಗೂ ಐಎಂಎಗಳ ಹಳೆ ವಿದ್ಯಾರ್ಥಿ. 1981ರಲ್ಲಿ ಅವರು ಜಾಟ್ ರೆಜಿಮೆಂಟ್‌ನ 7ನೆ ಬೆಟಾಲಿಯನ್‌ಗೆ ನಿಯೋಜನೆಗೊಂಡಿದ್ದರು 36 ವರ್ಷಗಳ ಸೈನಿಕ ಜೀವನದಲ್ಲಿ ಸೈನಿ, ಅನೇಕ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು.