×
Ad

ಹಿರಿಯ ಸಿಪಿಎಂ ನಾಯಕ ಕೆ.ಅನಿರುದ್ಧನ್ ನಿಧನ

Update: 2016-05-23 22:47 IST

ತಿರುವನಂತಪುರ,ಮೇ 23: ಹಿರಿಯ ಸಿಪಿಎಂ ನಾಯಕ,ಮಾಜಿ ಶಾಸಕ ಹಾಗೂ ಸಂಸದ ಕೆ.ಅನಿರುದ್ಧನ್(92) ಅವರು ರವಿವಾರ ರಾತ್ರಿ ಇಲ್ಲಿ ತನ್ನ ನಿವಾಸದಲ್ಲಿ ನಿಧನರಾದರು. ಅವರು ಕೆಲವು ಸಮಯದಿಂದ ವೃದ್ಧಾಪ್ಯ ಸಂಬಂಧಿತ ಕಾಯಿಲೆಗಳಿಂದ ನರಳುತ್ತಿದ್ದರು.

ರಾಜ್ಯದ ದಕ್ಷಿಣದ ಭಾಗಗಳಲ್ಲಿ ಕಮ್ಯುನಿಸ್ಟ್ ಪಕ್ಷದ ಆಂದೋಲನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು 1963,1965,1979 ಮತ್ತು 1980ರಲ್ಲಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. ಸಕ್ರಿಯ ಕಾರ್ಮಿಕ ನಾಯಕರೂ ಆಗಿದ್ದ ಅವರು 1967ರಲ್ಲಿ ಇಲ್ಲಿಗೆ ಸಮೀಪದ ಚಿರಾಯಿಂಕಿಲ್ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಆರ್.ಶಂಕರ್ ಅವರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು.
ಅವರು ಪತ್ನಿ ಸುಧರ್ಮಾ,ಪುತ್ರರಾದ ಸಿಪಿಎಂ ಸಂಸದ ಎ.ಸಂಪತ್ ಮತ್ತು ಕಸ್ತೂರಿ ಅವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News