ಕಳತ್ತೂರು ಜಲ್ಲಿ ಕ್ರಷರ್‌ಗೆ ತಹಶೀಲ್ದಾರ್ ಅನುಮತಿ: ಇಂದು ಬ್ರಹ್ಮಾವರದಲ್ಲಿ ಪ್ರತಿಭಟನೆ

Update: 2016-05-23 18:19 GMT

ಉಡುಪಿ, ಮೇ 23: 38 ಕಳತ್ತೂರು, ಚಾರ ಹಾಗೂ ನಾಲ್ಕೂರು ಗ್ರಾಪಂಗಳ ಜನತೆಯ ಪ್ರತಿರೋಧದ ಹೊರತಾಗಿಯೂ ಕಳತ್ತೂರಿನಲ್ಲಿ ಜಲ್ಲಿ ಕ್ರಷರ್ ಸ್ಥಾಪನೆಗೆ ಬ್ರಹ್ಮಾವರ ವಿಶೇಷ ತಹಶೀಲ್ದಾರರು ಪರವಾನಿಗೆ ನೀಡಲು ಮುಂದಾಗಿರುವುದನ್ನು ಖಂಡಿಸಿ ಗ್ರಾಮಸ್ಥರು ಮೇ 24ರಂದು ಬ್ರಹ್ಮಾವರ ವಿಶೇಷ ತಹಶೀಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ.

ಸೋಮವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ 38 ಕಳತ್ತೂರು ಜಲ್ಲಿ ಕ್ರಷರ್ ವಿರೋಹೋರಾಟ ಸಮಿತಿಯ ಸಲಹೆಗಾರ, ಉಡುಪಿಯ ನ್ಯಾಯವಾದಿ ಜಿ.ಅಶೋಕ ಕುಮಾರ್ ಶೆಟ್ಟಿ ಹಾಗೂ ಸಮಿತಿಯ ಅಧ್ಯಕ್ಷ ಮುದ್ದು ಪೂಜಾರಿ ಈ ವಿಷಯ ತಿಳಿಸಿದರು.

ಕುದುರೆಮುಖ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ನಾಲ್ಕೂರು, ಚಾರ ಹಾಗೂ ಕಳತ್ತೂರು ಗ್ರಾಮಗಳು ಜಿಲ್ಲೆಯ ಅತಿ ಹಿಂದುಳಿದ ಕುಗ್ರಾಮಗಳಾಗಿದ್ದು, ಪ್ರಕೃತಿದತ್ತವಾದ ಸುಂದರ ರಮಣೀಯ ಪ್ರದೇಶವಾಗಿದೆ. ಕಳತ್ತೂರು ಗ್ರಾಮದ ಆರತಿ ಆರ್.ಅಡ್ಯಂತಾಯ ಎಂಬವರು ತಮ್ಮ ಸುಮಾರು ಒಂದು ಎಕರೆ ಪ್ರದೇಶ ಹಾಗೂ ತಾಗಿಕೊಂಡಿರುವ ಸರಕಾರಿ ಜಾಗದಲ್ಲಿರುವ ಬೃಹತ್ ಶಿಲೆಕಲ್ಲಿನ ಬಂಡೆಗಳ ಪ್ರದೇಶದಲ್ಲಿ ಜಲ್ಲಿ ಕ್ರಷರ್‌ನ್ನು ಪ್ರಾರಂಭಿಸಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.

ಜಲ್ಲಿ ಕ್ರಷರ್‌ಗೆ ಪ್ರಸ್ತಾಪಿತ ಜಾಗ ಜನವಸತಿ ಪ್ರದೇಶವಾಗಿದ್ದು, ಇಲ್ಲಿನ ಬುಡಕಟ್ಟು ಜನಾಂಗ ನಂಬಿಕೊಂಡು ಬಂದಿರುವ ಪುರಾತನ ಕಟ್ಟೀಮನೆ ದೇವಿ ದೇವಸ್ಥಾನ ತೀರಾ ಸಮೀಪದಲ್ಲಿದೆ. ಈ ದೇವಸ್ಥಾನವನ್ನು ಸರಕಾದ ಅನುದಾನದಿಂದ ಇತ್ತೀಚೆಗೆ ನವೀಕರಿಸಲಾಗಿದೆ. ಅಲ್ಲದೆ ಈ ಪ್ರದೇಶಕ್ಕೆ ಕಾಂಕ್ರಿಟ್ ರಸ್ತೆಯನ್ನು ಸರಕಾರ ನಿರ್ಮಿಸಿದೆ. ಜಲ್ಲಿ ಕ್ರಷರ್‌ಗೆ ಅನುಮತಿ ನೀಡಿದರೆ ಮೊದಲು ಈ ದೇವಸ್ಥಾನ ಅಪಾಯ ಎದುರಿಸಲಿದೆ. ಅಲ್ಲದೆ ಈ ಜಾಗಕ್ಕೆ 100 ಮೀ. ದೂರದಲ್ಲೇ ಪರಿಸರದ ನೂರಾರು ಯುವಕ-ಯುವತಿಯರಿಗೆ ಉದ್ಯೋಗ ನೀಡಿರುವ ಗೇರುಬೀಜ ಕಾರ್ಖಾನೆ ಹಾಗೂ ಒಂದು ಸರಕಾರಿ ಶಾಲಾ ಕಟ್ಟಡವೂ ಇವೆ. ಕ್ರಷರ್‌ನಿಂದ ಇವೆರಡೂ ಅಪಾಯಕ್ಕೀಡಾಗಲಿವೆ ಎಂದರು.

ಕಳತ್ತೂರಿನಲ್ಲಿ ಜಲ್ಲಿ ಕ್ರಷರ್‌ಗೆ ಅನುಮತಿ ನೀಡುವುದನ್ನು ವಿರೋಸಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ಜಿಲ್ಲಾಕಾರಿಗೆ ಮನವಿಯನ್ನು ಗ್ರಾಮಸ್ಥರ ಪರವಾಗಿ ಅರ್ಪಿಸಿದ್ದೇವೆ. ಆದರೂ ಜಾಗಕ್ಕೆ ಬಂದು ವಸ್ತುಸ್ಥಿತಿಯನ್ನು ಅರಿಯದೇ ತಹಶೀಲ್ದಾರರು ಇದಕ್ಕೆ ಅನುಮತಿ ನೀಡಿದ್ದು, 28ರಂದು ಇಲಾಖೆಯ ಅಕಾರಿಗಳು ಬಂದು ಪರಿಶೀಲನೆಯ ಶಾಸ ನಡೆಸಲಿದ್ದಾರೆ. ಇವುಗಳನ್ನು ವಿರೋಸಲು ಗ್ರಾಮಸ್ಥರು ಈಗಾಗಲೇ ಸಜ್ಜಾಗಿದ್ದಾರೆ ಎಂದು ಅವರು ನುಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮಿಥುನ್, ಪ್ರಸನ್ನಕುಮಾರ್, ಗುಣಕರ ಶೆಟ್ಟಿ, ಉದಯ ನಾಯ್ಕಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News