ಅನುಬೆಳ್ಳೆ , ಸದಾನಂದ ನಾರಾವಿ ಅವರಿಗೆ ಪ್ರಶಸ್ತಿ
Update: 2016-05-24 14:34 IST
ಮೂಡುಬಿದಿರೆ, ಮೇ 24: ಬೆಂಗಳೂರಿನ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಇದರ ವತಿಯಿಂದ ಪ್ರತೀ ವರ್ಷದಂತೆ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ನೀಡುವ 2015ರ ಸಾಲಿನ ಪ್ರಶಸ್ತಿಗೆ ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರು ಮತ್ತು ಕಾದಂಬರಿಕಾರರಾದ ಶ್ರೀ ರಾಘವೇಂದ್ರ ಬಿ.ರಾವ್ (ಅನುಬೆಳ್ಳೆ) ಅವರ ಸುಡುಗಾಡ ಕಾಯಕಥಾಸಂಕಲನ ಮತ್ತು ಬರಹಗಾರ ಮತ್ತು ನಿವೃತ್ತ ಅಂಚೆಪಾಲಕರೂ ಆಗಿರುವ ಶ್ರೀ ಸದಾನಂದ ನಾರಾವಿ ಅವರ ಲೇಖನಗಳ ಸಂಗ್ರಹ ಸಂರಚನೆಯ ಸುತ್ತಮುತ್ತಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮೇ 29ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾಶರಣರ ಪಾವನಸಾನಿಧ್ಯದಲ್ಲಿ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಡಾ. ಮನು ಬಳಿಗಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿರುವರು ಎಂಬುದಾಗಿ ಪ್ರಕಟಣೆ ತಿಳಿಸಿದೆ.