ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಟಿ.ಶ್ಯಾಂ ಭಟ್ ನೇಮಕಾತಿಯನ್ನು ತಿರಸ್ಕರಿಸಿ: ಅಂಬೇಡ್ಕರ್ ಯುವ ಸೇನೆ
Update: 2016-05-24 15:31 IST
ಮಂಗಳೂರು, ಮೇ 24: ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ "ಕರ್ನಾಟಕ ಲೋಕಸೇವಾ ಆಯೋಗ"ದ ಅಧ್ಯಕ್ಷರಾಗಿ ಟಿ.ಶ್ಯಾಂ ಭಟ್ ನೇಮಕಾತಿಯನ್ನು ಅನುಮೋದಿಸಿದ ಪ್ರಸ್ತಾವನೆ ಮಾನ್ಯ ರಾಜ್ಯಪಾಲರಿಗೆ ಸರ್ಕಾರವು ಕಳುಹಿಸಿದ್ಧು ಇವರ ಮೇಲೆ ಭ್ರಷ್ಟಾಚಾರದ ಸಾಕಷ್ಟು ಪ್ರಕರಣಗಳು ದಾಖಲಾಗಿವೆ ಅವುಗಳು ತನಿಖೆಯ ಹಂತದಲ್ಲಿವೆ. ಆದ್ದರಿಂದ ಇವರ ನೇಮಕಾತಿ ಪ್ರಸ್ತಾವನೆಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿ " ಅಂಬೇಡ್ಕರ್ ಯುವ ಸೇನೆ " ವತಿಯಿಂದ ಮಾನ್ಯ ರಾಜ್ಯಪಾಲರಿಗೆ ಇಂದು ಮನವಿಯನ್ನು ಸಲ್ಲಿಸಲಾಯಿತು ಎಂದು ಅಂಬೇಡ್ಕರ್ ಯುವ ಸೇನೆಯ ಕೋದಂಡರಾಮ್.ಎಚ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.