ಆಕ್ಟೀವಾ, ಜೀಪು ಢಿಕ್ಕಿ: ಸವಾರ ಗಂಭೀರ
Update: 2016-05-24 18:07 IST
ಪುತ್ತೂರು, ಮೇ 24: ಆಕ್ಟೀವಾ ಹೋಂಡಾ ಮತ್ತು ಜೀಪು ನಡುವೆ ಢಿಕ್ಕಿ ಸಂಭವಿಸಿದ್ದು ಸ್ಕೂಟರ್ ಸವಾರ ತೀವ್ರ ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ಪುತ್ತೂರು ನಗರದ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಬಕ ಸಮೀಪ ನಡೆದಿದೆ.
ಮಂಗಳೂರು ಕಡೆಯಿಂದ ಪುತ್ತೂರು ಕಡೆ ಬರುತ್ತಿದ್ದ ಆಕ್ಟೀವಾ ಹೋಂಡಾ ಮತ್ತು ಕಬಕ ಜಂಕ್ಷನ್‌ನಲ್ಲಿದ್ದ ಜೀಪು ನಡುವೆ ಢಿಕ್ಕಿ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಮಂಗಳೂರು ಬಜ್ಪೆ ನಿವಾಸಿ ಜಯರಾಮ್ ಭಟ್(60) ರಸ್ತೆಗೆಸೆಯಲ್ಪಟ್ಟು ಕಾಲು ಮುರಿತಕ್ಕೊಳಗಾಗಿದ್ದಾರೆ.
ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.