ಮಲಯಾಳಂನ ಶಟರ್ ಚಿತ್ರ ತುಳುವಿನಲ್ಲಿ ‘ಶಟರ್‌ದುಲಾಯಿ’!

Update: 2016-05-24 13:19 GMT

ಮಂಗಳೂರು, ಮೇ 24: ಮಲಯಾಳಂನಲ್ಲಿ ಹೆಸರು ಮಾಡಿದ್ದ ಶಟರ್ ಚಲನಚಿತ್ರ ಇದೀಗ ತುಳುವಿಲ್ಲಿ ‘ಶಟರ್ ದುಲಾಯಿ’ ಶಿರೋನಾಮೆಯೊಂದಿಗೆ ಮೇ 27ರಂದು ನಗರದ ಮಲ್ಟಿಪ್ಲೆಕ್ಸ್ ಸಿನೆಮಾ ಮಂದಿರಗಳಲ್ಲಿ ತೆರೆ ಕಾಣಲಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಚಿತ್ರದ ನಿರ್ದೇಶಕ ಶಶಿಕಾಂತ್ ಗಟ್ಟಿ, ಮೂಲಚಿತ್ರವಾದ ಮಲಯಾಳಂನ ಕಥೆಯನ್ನೇ ಆಧರಿಸಿ ತುಳುವಿನಲ್ಲಿ ಚಿತ್ರ ನಿರ್ಮಾಣವಾಗಿದ್ದರೂ, ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ ಎಂದರು.

ಚಿತ್ರದಲ್ಲಿ ಕನ್ನಡದ ಹಿರಿಯ ಹಾಗೂ ಖ್ಯಾತ ನಟ ಜೈ ಜಗದೀಶ್, ಅನಿತಾ ಭಟ್, ಮಿತ್ರಾ, ಪ್ರಸಾದ್ ಭಟ್ ಹಾಗೂ ಪ್ರಕಾಶ್ ಶೆಣೈ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವಿ.ಎಸ್. ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್‌ನ ಈ ಚಿತ್ರವನ್ನು ರಾಜೇಶ್ ಭಟ್ ಹಾಗೂ ಅನಿಶ್ ಅಂಟನೀ ನಿರ್ಮಾಣ ಮಾಡಿದ್ದು, ತುಳುವಿನಲ್ಲಿ ಕಾಮಿಡಿ ಚಿತ್ರಗಳ ಅಬ್ಬರದ ನಡುವೆ ವಿಭಿನ್ನ ಹಾಗೂ ಸಾಮಾಜಿಕ ಸಂದೇಶವನ್ನು ಸಾರುವ ಕಥೆಯನ್ನೊಳಗೊಂಡ ಗಂಭೀರ ಚಿತ್ರವನ್ನು ನೀಡುವ ಪ್ರಯತ್ನ ಇದಾಗಿದೆ ಎಂದರು.

ಕದ್ರಿ ಮಣಿಕಾಂತ್ ಸಂಗೀತ ನೀಡಿರುವ ಚಿತ್ರವು ಒಂದು ಹಾಡನ್ನು ಹೊಂದಿದ್ದು, ಬೆಂಗಳೂರು, ಸಕಲೇಶಪುರ ಹಾಗೂ ಮಂಗಳೂರಿನಲ್ಲಿ 30 ದಿನಗಳಲ್ಲಿ ಚಿತ್ರೀಕರಣಗೊಂಡಿದೆ ಎಂದು ನಿರ್ಮಾಪಕ ರಾಜೇಶ್ ಭಟ್ ತಿಳಿಸಿದರು.

ಗೋಷ್ಠಿಯಲ್ಲಿ ನಟ ಜೈಜಗದೀಶ್, ರಾಜೇಶ್ ಭಟ್, ಅನಿತಾ ಭಟ್, ಮಿತ್ರಾ, ಪ್ರಕಾಶ್ ಪಾಂಡೇಶ್ವರ, ಕೀರ್ತನ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News