ಓಮ್ನಿ ಕಾರಿಗೆ ಬೈಕ್ ಢಿಕ್ಕಿ: ಸಹೋದರರಿಗೆ ಗಾಯ
Update: 2016-05-24 19:27 IST
ಬೆಳ್ತಂಗಡಿ, ಮೇ 24: ಓಮ್ನಿ ಕಾರೊಂದು ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬಂದ ಬೈಕ್ ಕಾರಿಗೆ ಢಿಕ್ಕಿ ಹೊಡೆದ ಘಟನೆ ಬೆಳ್ತಂಗಡಿ ಲಾಯಿಲದ ಅದರ್ಶ ನಗರ ಕ್ರಾಸ್‌ನಲ್ಲಿ ಸಂಭವಿಸಿದೆ.
ಘಟನೆಯಿಂದಾಗಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಉಜಿರೆ ಅತ್ತಾಜೆ ಕುಂಟಿನಿ ನಿವಾಸಿ ಇಬ್ರಾಹಿಂ ಅವರ ಪುತ್ರರಾದ ಆಶಿಕ್ ಮತ್ತು ಅಝೀಮ್ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.