ದ.ಕ. ಮುಸ್ಲಿಮ್ ಅಸೋಸಿಯೇಶನ್ ವತಿಯಿಂದ ಸೈಫ್ವಾನ್ ಕುಟುಂಬಕ್ಕೆ 2 ಲಕ್ಷ ರೂ. ಸಹಾಯಧನ ವಿತರಣೆ
Update: 2016-05-24 20:20 IST
ಮಂಗಳೂರು, ಮೇ 24: ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಚೆಂಬುಗುಡ್ಡೆಯ ಸೈಫಾನ್ ಕುಟುಂಬಕ್ಕೆ ದ.ಕ. ಮುಸ್ಲಿಮ್ ಅಸೋಸಿಯೇಶನ್ ವತಿಯಿಂದ 2 ಲಕ್ಷ ರೂ. ಸಹಾಯಧನವನ್ನು ಇಂದು ವಿತರಿಸಲಾಯಿತು.
ದ.ಕ. ಮುಸ್ಲಿಮ್ ಅಸೋಸಿಯೇಶನ್‌ನ ಸ್ಥಾಪಕಾಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಗ್ರೂಪ್ 4, ಕೋಶಾಧಿಕಾರಿ ಬಿ.ಎಸ್ ಬಷೀರ್, ಸಂಘಟನಾ ಕಾರ್ಯದರ್ಶಿ ಎಸ್.ಎಂ ಫಾರೂಕ್ ಮತ್ತು ಜೊತೆ ಕಾರ್ಯದರ್ಶಿ ರಫೀಕ್ ಮಾಸ್ಟರ್‌ರಿದ್ದ ತಂಡ ಭೇಟಿ ಸೈಫಾನ್‌ರ ಮನೆಗೆ ಇಂದು ಭೇಟಿ ನೀಡಿ ಸಹಾಯಧನ ವಿತರಿಸಿತು.
ದ.ಕ. ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಮ್ ಕುಟುಂಬಗಳ ಯಜಮಾನ ಅಥವಾ ದುಡಿಯುವ ವ್ಯಕ್ತಿಗಳು ಮೃತಪಟ್ಟ ಸಂದರ್ಭ ಆ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ದ.ಕ. ಮುಸ್ಲಿಮ್ ಅಸೋಸಿಯೇಶನ್ ಸ್ಫಾಪಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭದಲ್ಲಿ ಘೋಷಿಸಿರುವಂತೆ ಸೈಫಾನ್ ಕುಟುಂಬಕ್ಕೆ 2 ಲಕ್ಷ ರೂ. ಸಹಾಯಧನವನ್ನು ವಿತರಿಸಲಾಗಿದೆ.