ಮುಸ್ಲಿಮರ ಕಡೆಗಣನೆ : ಕಾಂಗ್ರೆಸ್ ಅಧ್ಯಕ್ಷೆಗೆ ಪತ್ರ

Update: 2016-05-24 17:17 GMT

ಭೋಪಾಲ, ಮೇ 24: ಮಧ್ಯಪ್ರದೇಶ ಕಾಂಗ್ರೆಸ್‌ನ ಮುಸ್ಲಿಮ್ ನಾಯಕರೊಬ್ಬರು ಸೋನಿಯಾಗಾಂಧಿಯವರಿಗೆ ಪತ್ರ ಬರೆಯುವ ಮೂಲಕ ಮಧ್ಯಪ್ರದೇಶದಿಂದ ರಾಜ್ಯಸಭೆಗೆಮುಸ್ಲಿಮ್ ನಾಯಕರನ್ನು ಕಳುಹಿಸಬೇಕೆಂದು ಸಲಹೆ ನೀಡಿದ್ದಾರೆ. ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಇದ್ರೀಸ್ ಖಾನ್ ಈ ಪತ್ರ ಬರೆದಿದ್ದು, ಇಂತಹ ಕ್ರಮಗಳಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸು ಹೆಚ್ಚಲಿವೆ ಹಾಗೂ ಮುಸ್ಲಿಂ ಮತದಾರರು ಪಕ್ಷದೆಡೆಗೆ ಆಕರ್ಷಿತರಾಗುವರೆಂದು ತಿಳಿಸಿದ್ದಾರೆ.

  ಮಾರ್ಚ್ 23ಕ್ಕೆ ಪತ್ರ ಬರೆದಿರುವ ಖಾನ್" 2012ರಲ್ಲಿ ತಾವು ಇಬ್ರೀಹೀಂ ಕುರೈಶಿಯನ್ನು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಕಳುಹಿಸಲು ನಿರ್ಧರಿಸಿದ್ದಿರಿ. ಕೊನೆಯ ಗಳಿಗೆಯಲ್ಲಿ ಅವರಿಗೆ ಸೀಟು ನೀಡಲಿಲ್ಲ. ಹಾಗೂ ಕಾಂಗ್ರೆಸ್‌ನ ಹಿರಿಯನಾಯಕ ಸತ್ಯವ್ರತ ಚತುರ್ವೇದಿಯವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಯಿತು. ಒಂದು ವೇಳೆ ನೀವು ಕುರೈಶಿಯನ್ನು ಯಾವುದೋ ಕಾರಣದಿಂದ ಸಂಸದನಾಗಿ ಮಾಡಲು ಇಚ್ಛಿಸಲಿಲ್ಲ ಎಂದಾಗಿದ್ದರೆ ಬೇರೆ ಮುಸ್ಲಿಮ್ ನಾಯಕನಿಗೆ ಅವಕಾಶ ನೀಡಬಹುದಾಗಿತ್ತು. ನಿಮ್ಮ ನಿರ್ಧಾರವನ್ನು ಬದಲಿಸುವಂತೆ ಸಂಚು ನಡೆಸುತ್ತಿರುವ ನಾಯಕ ಯಾರು? ನೀವು ಯಾಕೆ ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸಿಲ್ಲ. ನಿಮ್ಮ ನಾಯಕತ್ವದ ಸಾಮರ್ಥ್ಯವನ್ನು ಇದು ಪ್ರಶ್ನಾರ್ಹಗೊಳಿಸುತ್ತದೆ" ಎಂದು ಬರೆದಿದ್ದಾರೆ.

 ಪತ್ರದಲ್ಲಿ ಮುಂದುವರಿದು"2014ರಲ್ಲಿಯೂ ಮುಸ್ಲಿಮರನ್ನು ರಾಜ್ಯಸಭೆಗೆ ಕಳುಹಿಸಲಿಲ್ಲ. ಸೈಯದ್ ಸಾಜಿದ್ ಅಲಿ, ಮಸ್ರತ್ ಶಾಹಿದ್, ಇಬ್ರಾಹೀಂ ಕುರೈಶಿ ಮತ್ತು ಉಳಿದ ನಾಯಕರು ದಿಲ್ಲಿಯಲ್ಲಿ ಆಲ್ ಇಂಡಿಯ ಕಾಂಗ್ರೆಸ್ ಕಮಿಟಿಯ ಪ್ರಮುಖ ಪದಾಧಿಕಾರಿಗಳ ಸಂಪರ್ಕದಲ್ಲಿದ್ದರು. ಆದರೆ ಸೀಟು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್‌ರ ಪಾಲಾಯಿತು. ಇದು ಇಡೀ ಮುಸ್ಲಿಂ ಸಮುದಾಯಕ್ಕೆ ಧಕ್ಕೆಯಾಗಿ ಪರಿಣಮಿಸಿದೆ" ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಮಾತುಗಳು ಪಕ್ಷದ ಅಧ್ಯಕ್ಷರವರೆಗೆ ತಲುಪಿಸುವ ಯಾವುದೇ ವ್ಯವಸ್ಥೆ ಕಾಂಗ್ರೆಸ್‌ನಲ್ಲಿಲ್ಲ ಎಂದು ಕೂಡಾ ಖಾನ್ ಆರೋಪ ಹೊರಿಸಿದ್ದಲ್ಲದೆ ಪತ್ರದಲ್ಲಿ ಪಕ್ಷದ ಅಧ್ಯಕ್ಷರಿಗೆ “ಕಾರ್ಯಕರ್ತರು ಪತ್ರ ಬರೆಯುವಂತಹ ವ್ಯವಸ್ಥೆ ಮಾಡಿರಿ. ಕೊನೆಪಕ್ಷ ನಿಮ್ಮ ಕಡೆಯಿಂದ ಒಂದು ಉತ್ತರವಾದರೂ ಅವರಿಗೆ ಲಭಿಸುವಂತಾಗಲಿ. ಇದರಿಂದ ಪಕ್ಷ ಸದೃಢವಾಗಲಿದೆ" ಎಂದು ಖಾನ್ ಸಲಹೆಯನ್ನೂ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News