ಗಾಂಜಾ ಸೇವನೆ: ಓರ್ವನ ಬಂಧನ
Update: 2016-05-24 22:49 IST
ಮಂಗಳೂರು, ಮೇ 24: ನಗರದ ಕೂಳೂರು ಭಾರತ್ ಪೆಟ್ರೋಲಿಯಂ ಬಳಿ ಗಾಂಜಾ ಸೇವನೆ ಮಾಡಿರುವ ಓರ್ವನನ್ನು ಕಾವೂರು ಠಾಣಾ ಪೋಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಈತ ಗಾಂಜಾ ಸೇವಿಸಿರುವ ಅನುಮಾನದ ಮೇರೆಗೆ ಕಾವೂರು ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ವೈದ್ಯಕೀಯ ತಪಾಸಣೆ ವೇಳೆ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.