ಗ್ಯಾರೇಜ್‌ಗೆ ನುಗ್ಗಿದ ಬಸ್: 5 ವಾಹನಗಳು ಜಖಂ

Update: 2016-05-24 17:50 GMT

ಉಳ್ಳಾಲ, ಮೇ 24: ಬ್ರೇಕ್ ವೈಫಲ್ಯಕ್ಕೊಳಗಾದ ಬಸ್ಸೊಂದು ಗ್ಯಾರೇಜ್‌ಗೆ ನುಗ್ಗಿ ರಿಪೇರಿಗೆ ಬಂದಿದ್ದ ಐದು ವಾಹನಗಳು ಜಖಂಗೊಂಡಿರುವ ಘಟನೆ ಕುತ್ತಾರು ಸಮೀಪದ ಮದನಿನಗರ ಎಂಬಲ್ಲಿ ಸೋಮವಾರ ಸಂಭವಿಸಿದೆ.

ಬ್ರೇಕ್ ವೈಫಲ್ಯಗೊಂಡ ಪರಿಣಾಮ ಬಸ್ ರೆಹ್ಮಾನ್ ಎಂಬವರಿಗೆ ಸೇರಿದ ಬೈಕ್ ಪಾಯಿಂಟ್ ಎಂಬ ಗ್ಯಾರೇಜಿಗೆ ನುಗ್ಗಿತ್ತು. ಕಿನ್ಯಾದಿಂದ ತೊಕ್ಕೊಟ್ಟುವಿಗೆ ಬಸ್ ಸಂಚರಿಸುತ್ತಿದ್ದಾಗ ಘಟನೆ ಸಂಭವಿಸಿದ್ದು ಐದು ವಾಹನಗಳು ಜಖಂಗೊಂಡಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News