ಡಿವೈಎಫ್‌ಐ ವತಿಯಿಂದ ಉಚಿತ ಪುಸ್ತಕ ವಿತರಣೆ
Update: 2016-05-24 23:30 IST
ಮಂಗಳೂರು, ಮೇ 24:ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಉರ್ವಸ್ಟೋರ್ ಘಟಕದ ವತಿಯಿಂದ ಕೊಟ್ಟಾರದ ಲೇಖಕಿಯರ ಭವನದಲ್ಲಿ ಇತ್ತೀಚೆಗೆ ಬಡ ಶಾಲಾ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು 85 ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮತ್ತು ಮಂಗಳೂರು ನಗರ ದಕ್ಷಿಣ ಸಮಿತಿ ಅಧ್ಯಕ್ಷ ರಾಜೇಶ್ ಕುಲಾಲ್ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಶಾಂತ್ ಎಂ.ಬಿ. ವಹಿಸಿದ್ದರು. ಸ್ಥಳೀಯ ಡಿವೈಎಫ್‌ಐ ಮುಖಂಡರುಗಳಾದ ಪ್ರಶಾಂತ್ ಆಚಾರ್, ಸುಕೇಶ್ ಅಶ್ವಥ್ ಕಿಶೋರ್,ಇಕ್ಬಾಲ್ ಉಪಸ್ಥಿತರಿದ್ದರು.ಡಿವೈಎಫ್‌ಐ ಉರ್ವಸ್ಟೋರ್ ಘಟಕದ ಕಾರ್ಯದರ್ಶಿ ಧನ್‌ರಾಜ್ ಕಾರ್ಯಕ್ರಮ ನಿರೂಪಿಸಿದರು.