ಪುತ್ತೂರು ತಾಲೂಕು ಪಂಚಾಯತ್‌ನ ಸ್ಥಾಯಿ ಸಮಿತಿಗಳಿಗೆ ನೇಮಕ
ಪುತ್ತೂರು, ಮೇ 24: ಪುತ್ತೂರು ತಾಲೂಕು ಪಂಚಾಯತ್ ಸ್ಥಾಯಿ ಸಮಿತಿಗಳಿಗೆ ಮಂಗಳವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರ ನೇಮಕ ಮಾಡಲಾಗಿದೆ.
ಹಣಕಾಸು ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿಗೆ ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ ಅಧ್ಯಕ್ಷರಾಗಿರುತ್ತಾರೆ. ಲಕ್ಷ್ಮಣ ಗೌಡ, ಹರೀಶ್ ನಾಯ್ಕ ಬಿಜತ್ರೆ, ಕುಸುಮ ಪಿ.ವೈ, ವಲ್ಸಮ್ಮ ಮತ್ತು ಜಯಂತಿ ಗೌಡ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಸಾಮಾಜಿಕ ನ್ಯಾಯ ಸಮಿತಿಗೆ ಬಜತ್ತೂರು ಕ್ಷೇತ್ರದ ಸದಸ್ಯ ಮುಕುಂದ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಶಿವರಂಜನ್, ಮೀನಾಕ್ಷಿ ಮಂಜುನಾಥ್, ತೇಜಸ್ವಿನಿ ಕಟ್ಟಪುಣಿ, ರಾಧಾಕೃಷ್ಣ ಬೋರ್ಕರ್, ಲಲಿತಾ ಈಶ್ವರ್ ಇವರು ಸದಸ್ಯರಾಗಿರುತ್ತಾರೆ.
ಸಾಮಾನ್ಯ ಸ್ಥಾಯಿ ಸಮಿತಿಗೆ ತಾಪಂ ಉಪಾಧ್ಯಕ್ಷರಾದ ರಾಜೇಶ್ವರಿ ಅಧ್ಯಕ್ಷರಾಗಿರುತ್ತಾರೆ. ಸಾಜ ರಾಧಾಕೃಷ್ಣ ಆಳ್ವಾ, ಸುಜಾತ ಕೃಷ್ಣ ಆಚಾರ್ಯ, ತಾರಾ ತಿಮ್ಮಪ್ಪ ಪೂಜಾರಿ, ದಿವ್ಯಾ ಪುರುಷೋತ್ತಮ ಮತ್ತು ಉಷಾ ಅಂಚನ್ ಸದಸ್ಯರಾಗಿದ್ದಾರೆ. ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆ ಈ ನೇಮಕಾತಿಗೆ ಅಂಗೀಕಾರ ನೀಡಿತು.