ಪುತ್ತೂರು: ಕರ್ನಾಟಕ ಭೂಷಣ ಪ್ರಶಸ್ತಿ ಪ್ರದಾನ
Update: 2016-05-24 23:35 IST
ಪುತ್ತೂರು, ಮೇ 24: ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯ ವತಿಯಿಂದ ಬೆಂಗಳೂರಿನ ಕಬ್ಬನ್ ಪಾರ್ಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಆರ್ಕಿಟೆಕ್ಟ್ ಪುತ್ತೂರಿನ ಡಾ.ಹರ್ಷ ಕುಮಾರ ರೈಯವರಿಗೆ ಕರ್ನಾಟಕಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆಡಳಿತ, ಸಾಮಾಜಿಕ, ಸಹಕಾರ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಹಾಗೂ ಸಾಧನೆ ಮಾಡಿದ ರಾಜ್ಯದ ಒಟ್ಟು 7 ಮಂದಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಈ ಸಂದರ್ಭ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅರಳಿ ನಾಗರಾಜ್, ಬೆಂಗಳೂರು ಕೊಳದ ಮಠ ಮಹಾಸಂಸ್ಥಾನದ ಡಾ. ಶಾಂತವೀರ ಮಹಾಸ್ವಾಮೀಜಿ, ಮಾಜಿ ಕೇಂದ್ರ ಸಚಿವ ಡಾ.ಎಂ.ವಿ.ರಾಜಶೇಖರನ್, ಚಿತ್ರನಟಿ ಶೃತಿರಾಜ್, ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ದನ್, ಅಕಾಡೆಮಿಯ ಅಧ್ಯಕ್ಷ ಜಿ.ವಿ.ರಾಜು ಹಾಗೂ ವಿವಿಧ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.