ಪಿಯುಸಿ ಫಲಿತಾಂಶದ ಪಟ್ಟಿ ಪಡೆದುಕೊಳ್ಳಲು ಸೂಚನೆ
Update: 2016-05-24 23:41 IST
ಉಡುಪಿ, ಮೇ 24: ಪಿಯುಸಿ ಕಾಲೇಜಿನ ಫಲಿತಾಂಶವು ಮೇ 25ರಂದು ಪ್ರಕಟಗೊಳ್ಳುವುದರಿಂದ ಉಡುಪಿ ಜಿಲ್ಲೆಯ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಪೂರ್ವಾಹ್ನ 11 ಗಂಟೆಗೆ ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಖುದ್ದಾಗಿ ಬಂದು ಫಲಿತಾಂಶದ ಪಟ್ಟಿಯನ್ನು ಪಡೆದು ಕೊಳ್ಳುವಂತೆ ಹಾಗೂ ಸಂಜೆ 4ಕ್ಕೆ ಆಯಾ ಕಾಲೇಜುಗಳಲ್ಲಿ ಫಲಿತಾಂಶವನ್ನು ಪ್ರಕಟಿಸುವಂತೆ ಉಡುಪಿ ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಬಿ. ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.