×
Ad

ಸಿಬಿಎಸ್‌ಇ: ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ಗೆ ಶೇ.100

Update: 2016-05-24 23:44 IST

ಉಡುಪಿ, ಮೇ 24: ಈ ಬಾರಿಯ ಕೇಂದ್ರ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 12ನೇ ತರಗತಿ ಪರೀಕ್ಷಾ ಲಿತಾಂಶದಲ್ಲಿ ಬ್ರಹ್ಮಾವರದ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಸಾರ್ವಕಾಲಿಕ ಶ್ರೇಷ್ಠ ಸಾಧನೆಯನ್ನು ಮಾಡಿದೆ. ಶಾಲೆ ಮತ್ತೊಮ್ಮೆ ಶೇ.100 ಲಿತಾಂಶವನ್ನು ದಾಖಲಿಸಿದ್ದು, ಪರೀಕ್ಷೆ ಬರೆದ ಎಲ್ಲ 92 ಮಂದಿ ತೇರ್ಗಡೆಗೊಂಡಿದ್ದಾರೆ ಎಂದು ಪ್ರಾಂಶುಪಾಲ ಮ್ಯಾಥ್ಯೂ ಸಿ.ನೈನಾನ್ ತಿಳಿಸಿದ್ದಾರೆ.

ಶಾಲೆಯ ನೇಹಾ ಮಕ್ಕಿತ್ತಾಯ ಶೇ.98.2 ಅಂಕಗಳನ್ನು ಗಳಿಸುವ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವುದಲ್ಲದೇ, ದೇಶದ ಮೊದಲ ಹತ್ತು ಅಗ್ರಸ್ಥಾನಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಪಿಸಿಎಂಬಿ ಕಾಂಬಿನೇಷನ್ ಅಭ್ಯಸಿಸಿದ ನೇಹಾ, ಇಂಗ್ಲಿಷ್‌ನಲ್ಲಿ 98, ಗಣಿತದಲ್ಲಿ 95, ಭೌತಶಾಸದಲ್ಲಿ 99, ರಸಾಯನ ಶಾಸದಲ್ಲಿ 100 ಹಾಗೂ ಜೀವಶಾಸದಲ್ಲಿ 99 ಸೇರಿ ಒಟ್ಟು 491 ಅಂಕಗಳನ್ನು ಗಳಿಸಿದ್ದಾರೆ.

ಪಿಸಿಎಂಸಿಎಸ್ ಕಾಂಬಿನೇಷನ್‌ನಲ್ಲಿ ಶೇ.96.2 ಅಂಕ ಗಳಿಸಿದ ದೇಬಾಂಜನ್ ಸಾಂತ್ರಾ ಶಾಲೆಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಸಾಂತ್ರಾ ಕಂಪ್ಯೂಟರ್ ಸೈನ್ಸ್‌ನಲ್ಲಿ 99 ಅಂಕ ಗಳಿಸಿದ್ದಾರೆ. ಉಳಿದಂತೆ ನೆಸ್ಸಾ ಡಿಸಿಲ್ವ, ಪ್ರೀತಮ್ ಎ ಶೆಟ್ಟಿ ಹಾಗೂ ಶ್ರೀನಾಗ್ ರಾವ್ ಎಸ್ ರಸಾಯನ ಶಾಸದಲ್ಲಿ 100 ಅಂಕ ಹಾಗೂ ಶ್ರೀನಾಗ್ ರಾವ್ ಕಂಪ್ಯೂಟರ್ ಸೈನ್ ್ಸನಲ್ಲಿ 100 ಅಂಕ ಗಳಿಸಿದ್ದಾರೆ ಎಂದು ಲಿಟ್ಲ್‌ರಾಕ್ ಶಾಲೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News