ಆಳ್ವಾಸ್ ಕಾಲೇಜು ಪ್ರಾಧ್ಯಾಪಕಿ ಶ್ರೀದೇವಿ ಕೆ.ಗೆ ಡಾಕ್ಟರೇಟ್

Update: 2016-05-24 18:25 GMT

ಮೂಡುಬಿದಿರೆ, ಮೇ 24: ಆಳ್ವಾಸ್ ಕಾಲೇಜು ಮೂಡುಬಿದಿರೆಯ ಪ್ರಾಧ್ಯಾಪಕಿ ಶ್ರೀ ದೇವಿ ಕೆ. ಅವರ ಪ್ರಾಕ್ಟಿಕಂ ಇನ್ ಸೋಷಲ್ ವರ್ಕ್ ಎಜುಕೇಶನ್ ವಿದ್ ಸ್ಪೆಷಲ್ ರೆಪರೆನ್ಸ್ ಟು ಕರ್ನಾಟಕ ಎಂಬ ಮಹಾಪ್ರಬಂಧಕ್ಕೆ ಕುವೆಂಪು ವಿ.ವಿ. ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ತುಮಕೂರು ವಿ.ವಿ. ಸಹಪ್ರಾಧ್ಯಾಪಕ ಪ್ರೊ.ರಮೇಶ್ ಬಿ. ಇವರಿಗೆ ಮಾರ್ಗದರ್ಶನ ನೀಡಿದ್ದರು.

ಇವರು ಕಾರ್ಕಳದ ದಿ.ಸುರೇಂದ್ರ ಕೆ.ವಿ. ಮತ್ತು ದಿ.ಗೀತಾ ಅವರು ಪುತ್ರಿ ಹಾಗೂ ಕಾರ್ಕಳ ಪಂಚಾಯತ್ ರಾಜ್ ಉದ್ಯೋಗಿ ವಿಶ್ವನಾಥರ ಪತ್ನಿ ಹಾಗೂ ಶಾಂತಾ ಕೆ.ವಿ. ಅವರ ಮೊಮ್ಮಗಳು.

ಪರಿಶಿಷ್ಟ ಜಾತಿಯ ರಾಣೆಯರ ಸಮುದಾಯದ ಮೊದಲ ಡಾಕ್ಟರೇಟ್ ಪಡೆದ ಹಿರಿಮೆ ಇವರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News