×
Ad

ಚೀನಾದಿಂದ ಬಿಹಾರಕ್ಕೆ ರೈಲು ಸಂಪರ್ಕ ಯೋಜನೆ..!

Update: 2016-05-25 10:20 IST

ಬೀಜಿಂಗ್‌, ಮೇ 25: ಟಿಬೆಟ್ ಮೂಲಕ ನೇಪಾಲಕ್ಕೆ ರಸ್ತೆ ಹಾಗೂ ರೈಲು ಸಂಪರ್ಕ ಸಾಧಿಸಿ ಯಶಸ್ವಿಯಾಗಿರುವ ಚೀನಾ ಇದೀಗ ಭಾರತದ ಬಿಹಾರಕ್ಕೂ ತನ್ನ ರೈಲು ಸೇವೆಯನ್ನು ವಿಸ್ತರಿಸುವ ಚಿಂತನೆ ನಡೆಸಿದೆ.
ಭಾರತದ ಬಿಹಾರಕ್ಕೆ ರೈಲು ಸಂಪರ್ಕ ಸಾಧಿಸುವುದರಿಂದ ಭಾರತ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ಸಂಪರ್ಕ ಮತ್ತು ವ್ಯವಹಾರವನ್ನು ವಿಸ್ತರಿಸಲು ಚೀನಾಕ್ಕೆ  ಸಹಕಾರಿಯಾಗಲಿದೆ ಎಂದು ಚೀನದ ಪತ್ರಿಕೆ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ. 
ನೇಪಾಲದ ರಾಸುವಾಗಾಧಿಗೆ ರೈಲು ಮಾರ್ಗ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಚೀನಾ ಈಗಾಗಲೇ ನೇಪಾಲ ಜೊತೆ ಮಾತುಕತೆ ನಡೆಸಿದೆ. 2020ರ ವೇಳೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಯೋಜನೆ ಪೂರ್ಣಗೊಂಡರೆ ಚೀನಾದ ಮುಂದಿನ ಯೋಜನೆ ರಾಸುವಾಗಾಧಿಯಿಂದ ಬೀರ‍್ಗುಂಜಿಗೆ ರೈಲು ಸಂಪರ್ಕ ವಿಸ್ತರಣೆ. ರಾಸುವಾಗಾಧಿಯಿಂದ ಬೀರ‍್ಗುಂಜಿಗೆ ರೈಲು ಸಂಪರ್ಕ ಸಾಧ್ಯವಾದರೆ ಬಿಹಾರಕ್ಕೆ ರೈಲು ಮಾರ್ಗ ನಿರ್ಮಿಸುವುದು ಚೀನಾಕ್ಕೆ ಸುಲಭ. ಯಾಕೆಂದರೆ ಬೀರ‍್ಗುಂಜಿಯಂದ ಬಿಹಾರಕ್ಕೆ ಇರುವ ದೂರ 240 ಕಿ.ಮಿ.  ಎಂದು ಗ್ಲೋಬಲ್‌ ಟೈಮ್ಸ್‌ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News