ತಮಿಳ್ನಾಡು ಸಚಿವ ಸಂಪುಟದಲ್ಲಿ ಪ್ರಥಮ ಮುಸ್ಲಿಂ ಮಹಿಳೆ
ಕೋಯಮತ್ತೂರು,ಮೇ 25: ತಮಿಳ್ನಾಡು ಸಚಿವ ಸಂಪುಟದಲ್ಲಿ ಪ್ರಥಮ ಮುಸ್ಲಿಂ ಮಹಿಳೆ ಸದಸ್ಯರಾಗಿದ್ದಾರೆ. ವೆಲ್ಲೂರು ಜಿಲ್ಲೆಯ ವಾಣಿಯಂಬಾಡಿ ವಿಧಾನಸಭಾ ಕ್ಷೇತ್ರದಿಂದ ವಿಜಯಿಯಾದ 53ವರ್ಷದ ನೀಲೋಫರ್ ಕಫೀಲ್ ಈ ಸಾಧನೆ ಮಾಡಿದ ಮುಸ್ಲಿಮ್ ವನಿತೆ.
ಕಾರ್ಮಿಕ ಕಲ್ಯಾಣ ಸಚಿವೆಯಾಗಿ ಅವರನ್ನು ಜಯಲಲಿತಾ ನಿಯೋಜಿಸಿದ್ದಾರೆ. ಸೋಮವಾರ ಅಧಿಕಾರಕ್ಕೆ ಬಂದ 29 ಸದಸ್ಯರ ಸಚಿವ ಸಂಪುಟದಲ್ಲಿ ನೀಲೋಫರ್ ಇದ್ದಾರೆ. ಈ ಪರಿಸ್ಥಿತಿಯಲ್ಲಿ ಮೊದಲ ದಿವಸವೇ ನಾಲ್ಕುಮಂದಿಯನ್ನು ಹೆಚ್ಚುವರಿಯಾಗಿ ಸಚಿವ ಸ್ಥಾನಕ್ಕೆನೇಮಿಸಲಾಗಿದೆ. ಜಿ.ಭಾಸ್ಕರನ್, ಸೇವೂರ್ ರಾಮಚಂದ್ರನ್, ಬಾಲಕೃಷ್ಣ ರೆಡ್ಡಿ ಮೊದಲಾದವರು ಹೆಚ್ಚುವರಿಯಾಗಿ ಸಚಿವ ಸ್ಥಾನ ಪಡೆದಿರುವ ಇತರರು. ವಾಣಿಯಂಬಾಡಿ ನಗರ ಸಭೆಯ ಚೇರ್‌ಮೆನ್ ಆಗಿ ಕೆಲಸ ಮಾಡಿದ ಅನುಭವ ನೀಲೋಫರ್‌ರಿಗಿದೆ. ಅಣ್ಣಾ ಡಿಎಂಕೆ ಕಾರ್ಯಕಾರಿ ಸಮಿತಿ ಸದಸ್ಯೆ, ಪೆಯುಲೂರ್ ವೆಸ್ಟ್ ಜಿಲ್ಲೆಯ ಉಪಾಧ್ಯಕ್ಷೆಯಾಗಿದ್ದಾರೆ. ಬಿಇಎಂಎಸ್(ಇಲೆಕ್ಟ್ರೋ ಹೋಮಿಯೋಪಥಿ) ಪದವಿಗಳಿಸಿದ್ದಾರೆ. ಪ್ರಥಮ ಬಾರಿ ತಮಿಳ್ನಾಡು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.