×
Ad

ಬ್ರೆಝಿಲ್: ದಿಲ್ಮಾ ರೌಸೆಫ್‌ರನ್ನು ಕೆಳಗಿಳಿಸಲು ನಡೆಸಿದ ಸಂಚು ಬಹಿರಂಗಕ್ಕೆ ತಂದ ಮಾಧ್ಯಮಗಳು

Update: 2016-05-25 12:19 IST

ಬ್ರಿಝೀಲಿಯ,ಮೇ 25: ಬ್ರೆಝಿಲ್ ಅಧ್ಯಕ್ಷೆ ದಿಲ್ಮ ರೌಸೆಫ್‌ರನ್ನು ಇಂಪೀಚ್‌ಮೆಂಟ್ ಮಾಡಲು ಉನ್ನತ ರಾಜಕೀಯ ಕೇಂದ್ರಗಳಲ್ಲಿ ಷಡ್ಯಂತ್ರ ರೂಪಿಸಿರುವುದು ಬೆಳಕಿಗೆ ಬಂದಿದೆ. ಭ್ರಷ್ಟಾಚಾರ ತನಿಖೆಯಿಂದ ಗಮನ ಬೇರೆಡೆಗೆ ಹರಿಸಲಿಕ್ಕಾಗಿ ದಿಲ್ಮಾರನ್ನು ಇಂಪೀಚ್‌ಮಾಡಲು ಸಂಚು ಹೆಣೆದಿರುವ ಫೋನ್‌ಕರೆ ಸಂಭಾಷಣೆಗಳನ್ನು ಬ್ರಿಝಿಲ್‌ನ ಮಾಧ್ಯಮಗಳು ಬಹಿರಂಗ ಪಡಿಸಿವೆ. ಸಂಚಿಗೆ ನೇತೃತ್ವ ನೀಡಿದ ಮಧ್ಯಂತರ ಸರಕಾರದ ಪ್ರಮುಖ ಸದಸ್ಯರೊಬ್ಬರು ಈ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದಾರೆಂದು ವರದಿಯಾಗಿದೆ.

ತಾತ್ಕಾಲಿಕ ಅಧ್ಯಕ್ಷ ಮೈಕಲ್ ಟೆಮರ್‌ರ ನಂಬಿಕಸ್ಥ ಮಧ್ಯಂತರ ಸರಕಾರದ ಯೋಜನಾ ಖಾತೆಯ ಸಚಿವ ರೊಮೀರೊ ಜೂಕ್ಕೋ ದಿಲ್ಮಾರ ವಿರುದ್ಧ ಸಂಚು ಹೆಣೆದಿರುವುದು ಈಗ ಮಾಧ್ಯಮಗಳ ಮೂಲಕ ಬಹಿರಂಗಗೊಂಡಿದೆ.ರಾಜೀನಾಮೆ ನೀಡಿಲ್ಲ ಸದ್ಯಕ್ಕೆ ದೂರವುಳಿಯಲು ನಿರ್ಧರಿಸಿದ್ದೇನೆಂದು ಜೂಕ್ಕೊ ಹೇಳಿದ್ದಾರೆ. ಈ ಮೊದಲು ತನ್ನ ಇಂಪೀಚ್‌ಮೆಂಟ್‌ಗೆ ಟೋಮರ್ ನೇತೃತ್ವದಲ್ಲಿ ಷಡ್ಯಂತ್ರ ರೂಪಿಸಲಾಗಿತ್ತು ಎಂದು ದಿಲ್ಮಾ ಆರೋಪಿಸಿದ್ದರು. ಈ ಆರೋಪ ನಿಜವಾದುದು ಎಂದು ಈಗಿನ ಘಟನೆಗಳಿಂದ ಸ್ಪಷ್ಟವಾಗಿದೆ.  ಸಂಚು ಬಹಿರಂಗವಾಗಿರುವುದರಿಂದ ಇಂಪೀಚ್‌ಮೆಂಟ್ ಕ್ರಮ ಸ್ಥಗಿತಗೊಳಿಸಬೇಕೆಂದು ದಿಲ್ಮಾರ ವರ್ಕರ್ಸ್‌ ಪಾರ್ಟಿ ಮೂಲಗಳುಆಗ್ರಹಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News