ಮದ್ರಸ ಉಸ್ತಾದರ ಪುತ್ರಿ ದ್ವಿತೀಯ ಪಿಯು ಕಾಮರ್ಸ್ ನಲ್ಲಿ 97.1%
ಬೆಳ್ತಂಗಡಿ, ಮೇ 25: ಕಿಲ್ಲೂರು ನಿವಾಸಿ, ಧಾರ್ಮಿಕ ಗುರುಗಳಾದ ಹಾಜಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಹಾಗೂ ಉಮೈರ ದಂಪತಿಯ ಪುತ್ರಿ, ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಎಂ. ಆಯಿಷಾ 2016ನೆ ಸಾಲಿನ ದ್ವಿತೀಯ ಪಿಯು ಕಾಮರ್ಸ್ ವಿಭಾಗದಲ್ಲಿ 600ಕ್ಕೆ 583 ಅಂಕ ಪಡೆದು ರಾಜ್ಯದ ಟಾಪರ್ ಗಳಲ್ಲಿ ಒಬ್ಬರಾಗಿದ್ದಾರೆ.
ಆಯಿಷಾ, ಹಿಂದಿಯಲ್ಲಿ 93, ಇಂಗ್ಲಿಷ್ 94, ಎಕೌಂಟ್ಸ್ 100, ಸ್ಟಾಟಿಸ್ಟಿಕ್ಸ್ 100, ಗಣಿತ 99 ಮತ್ತು ಬಿಸಿನೆಸ್ ಸ್ಟಡೀಸ್ ನಲ್ಲಿ 97 ಅಂಕ ಪಡೆದಿದ್ದಾರೆ.
ಆಕೆ ಎಸೆಸೆಲ್ಸಿಯಲ್ಲಿಯೂ 612 ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದರು.
ಚಾರ್ಟರ್ಡ್ ಅಕೌಂಟೆಂಟ್ ಆಗುವ ಗುರಿ ಹೊಂದಿರುವ ಆಯಿಷಾ ಜೂ. 19ರಂದು ಸಂಬಂಧಿತ ಪ್ರವೇಶ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾರೆ.
ಫಲಿತಾಂಶದಲ್ಲಿ ತುಂಬಾ ಖುಷಿಯಾಗಿದೆ. ಹೆತ್ತವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ನನ್ನ ಸಹೋದರಿ ಸುಹೈಮಾ ಎಂ. ಎಸ್ಸಿ ಮಾಡಿದ್ದಾರೆ. ಸಹೋದರ ಆಶಿಕ್ 10ನೆ ತರಗತಿ ಹಾಗೂ ತಂಗಿ ನಿಶ್ಮ 6ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಆಯಿಷಾ ಪ್ರತಿಕ್ರೀಯಿಸಿದ್ದಾರೆ.
ಆಯಿಷಾ ತುಂಬಾ ಸ್ನೇಹ ಜೀವಿ. ತನ್ನ ನಿರಂತರ ಪರಿಶ್ರಮ ದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು. ಫಲಿತಾಂಶದಿಂದ ನನಗೆ ತಂಬಾ ಖುಷಿಯಾಗಿದೆ ಎಂದು ತಂದೆ ಹಾಜಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ 'ವಾರ್ತಾಭಾರತಿ' ಗೆ ತಿಳಿಸಿದ್ದಾರೆ.