×
Ad

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಸಾಧಕಿಗೆ ಐ ಎ ಎಸ್ ಅಧಿಕಾರಿಯಾಗುವ ಗುರಿ

Update: 2016-05-25 15:21 IST
ದಕ್ಷಾ ಜೈನ್

ಮಂಗಳೂರು,ಮೇ 25; ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಮೂಡಬಿದ್ರೆ ಆಳ್ವಾಸ್ ಪಿ ಯು ಕಾಲೇಜಿನ ದಕ್ಷಾ ಜೈನ್ ಅವರಿಗೆ ಮುಂದೆ ಐ.ಎ.ಎಸ್ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಅವರು 593 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

 ದಕ್ಷಾ ಜೈನ್ ಶೇಕಡ 98.83 ಅಂಕ ಪಡೆದಿದ್ದು ಬ್ಯಸಿನೆಸ್ ಸ್ಟಡೀಸ್ ನಲ್ಲಿ 100 ಅಂಕ, ಅಕೌಂಟೆನ್ಸಿಯಲ್ಲಿ 100 ಅಂಕ, ಸ್ಟಾಟಿಟಿಕ್ಸ್‌ನಲ್ಲಿ 100 ಅಂಕ, ಬೇಸಿಕ್ ಮ್ಯಾಥಮ್ಯಾಟಿಕ್ಸ್‌ನಲ್ಲಿ 100 ಅಂಕ ಇಂಗ್ಲೀಷ್‌ನಲ್ಲಿ 94 ಅಂಕ,ಸಂಸ್ಕೃತದಲ್ಲಿ 99 ಅಂಕವನ್ನು ಪಡೆದುಕೊಂಡಿದ್ದಾರೆ.
 ಮೂಡಬಿದ್ರೆಯ ಪ್ರವೀಣ್ ಚಂದ್ರ ಮತ್ತು ಮಲ್ಲಿಕಾ ದಂಪತಿಯ ಪುತ್ರಿಯಾಗಿದ್ದಾರೆ. ಯಾವುದೆ ಕೋಚಿಂಗ್ ತೆಗೆದುಕೊಳ್ಳದೆ ಕೇವಲ ಕಾಲೇಜಿನ ಶಿಕ್ಷಣ ಪಡೆದು ಈ ಸಾಧನೆ ಮಾಡಿದ್ದಾರೆ.
 
ಪಿಯುಸಿ ವಿಜ್ಞಾನದಲ್ಲಿ ಅತ್ಯಧಿಕ ಅಂಕ ಪಡೆದ ಎಕ್ಸ್‌ಪರ್ಟ್ ವಿದ್ಯಾರ್ಥಿನಿ ವೈಷ್ಣವಿ ಬಲ್ಲಾಳ್‌ಗೆ ವೈದ್ಯೆಯಾಗುವ ಗುರಿ
  ಮಂಗಳೂರು : ಪಿಯುಸಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಎಕ್ಸ್‌ಪರ್ಟ್ ಪಿ ಯು ಕಾಲೇಜಿನ ಪಿಸಿಎಂಬಿ ವಿದ್ಯಾರ್ಥಿನಿ ವೈಷ್ಣವಿ ಬಲ್ಲಾಳ್ ಮುಂದೆ ವೈದ್ಯೆಯಾಗುವ ಗುರಿಯನ್ನಿಟ್ಟುಕೊಂಡಿದ್ದಾರೆ.
ವೈಷ್ಣವಿ ಬಲ್ಲಾಳ್ 600 ರಲ್ಲಿ 590 ಅಂಕವನ್ನು ಗಳಿಸಿದ್ದು ಕೆಮಿಸ್ಟ್ರಿ, ಬಯೋಲಜಿ, ಇಂಗ್ಲೀಷ್, ಗಣಿತ, ಸಂಸ್ಕೃತದಲ್ಲಿ ತಲಾ 100 ಅಂಕವನ್ನು ಪಡೆದರೆ ಇಂಗ್ಲೀಷ್‌ನಲ್ಲಿ 90 ಅಂಕವನ್ನು ಪಡೆದಿದ್ದಾರೆ.
 ಜೈಲ್‌ರೋಡ್ ನಿವಾಸಿ ಡಾ.ರಾಜೇಶ್ ಬಲ್ಲಾಳ್ ಮತ್ತು ವಸುಂದರ ಬಲ್ಲಾಳ್ ಪುತ್ರಿಯಾಗಿದ್ದಾರೆ.
 
 ವೈಷ್ಣವಿ ಬಲ್ಲಾಳ್ ಅವರು ಇಂಗ್ಲೀಷ್ ವಿಷಯದ ಉತ್ತರಪತ್ರಿಕೆಯನ್ನು ಮರುವೌಲ್ಯಮಾಪನ ಮಾಡಲು ನಿರ್ಧರಿಸಿದ್ದಾರೆ. ಇಂಗ್ಲೀಷ್ ನಲ್ಲಿ ಅವರು 96 ಅಂಕದ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ 90 ಅಂಕ ಬಂದಿರುವುದರಿಂದ ಮರುವೌಲ್ಯಮಾಪನಕ್ಕೆ ನಿರ್ಧರಿಸಿದ್ದಾರೆ.
 
  ಪಿಯುಸಿ ಫಲಿತಾಂಶ: ಅಲ್‌ಮದೀನ ಮಹಿಳಾ ಪದವಿಪೂರ್ವ ಕಾಲೇಜಿಗೆ 97 ಶೇಕಡ ಮಂಗಳೂರು,ಮೇ.25:ಪಿಯುಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ನರಿಂಗಾನದ ಅಲ್‌ಮದೀನ ಮಹಿಳಾ ಪದವಿಪೂರ್ವ ಕಾಲೇಜು 97 ಶೇಕಡ ಅಂಕ ಪಡೆದು ಸಾಧನೆಗೈದಿದೆ.
  
   ಇಲ್ಲಿನ 30 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು ಇದರಲ್ಲಿ 29 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಓರ್ವ ವಿದ್ಯಾರ್ಥಿನಿ ಅನುತ್ತೀರ್ಣರಾಗಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಆಯಿಷತ್ ಸಬಿನಾ 541 ಅಂಕವನ್ನು ಪಡೆದು ಕಾಲೇಜಿನಲ್ಲಿ ಅತ್ಯಧಿಕ ಅಂಕವನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News