ದ್ವಿತೀಯ ಪಿಯು: ಕಡಬ ಸೈಂಟ್ ಜೋಕಿಮ್ಸ್ ಶಾಲೆಗೆ 93.45 ಶೇ. ಫಲಿತಾಶ

Update: 2016-05-25 11:51 GMT

ಕಡಬ, ಮೇ 25. ಇಲ್ಲಿನ ಸೈಂಟ್ ಜೋಕಿಮ್ಸ್ ಪದವಿಪೂರ್ವ ಕಾಲೇಜು 2016ನೆ ಸಾಲಿನ ದ್ವಿತೀಯ ಪಿಯುಸಿಯಲ್ಲಿ 93.45 ಶೇಕಡಾ ಫಲಿತಾಂಶವನ್ನು ದಾಖಲಿಸಿದ್ದು, ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 107 ವಿದ್ಯಾರ್ಥಿಗಳಲ್ಲಿ 100 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕಲಾ ವಿಬಾಗದಲ್ಲಿ ಫಾತಿಮತ್ ತಸ್ರೀನಾ 516, ಕೈರುನ್ನೀಸಾ ಎಂ. 498, ಯಶ್ವಂತ್ ಕುಮಾರ್ ಕೆ.ಎಂ. 494 ಅಂಕಗಳನ್ನು ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ ಸುಖೇಶ್ ಎನ್. 545, ಸ್ನೇಹಾ ಎಸ್. 502, ಆಯಿಶಾ ಕೆ. 491, ಶಿವಾನಿ ಎನ್. 491 ಅಂಕಗಳನ್ನು ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ರೂಪೇಶ್ ಪಿರೇರಾ 549, ಸಿಂಧ್ಯಾ ಅಲ್ಫೋನ್ಸಾ ಡಿಸೋಜ 539, ಸೌರಭ್ 507 ಅಂಕಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News