ಕಣಚೂರು ಮಹಿಳಾ ಪದವಿಪೂರ್ವ ಕಾಲೇಜಿಗೆ ಶೇ. 91.89 ಫಲಿತಾಂಶ
Update: 2016-05-25 18:11 IST
ಮಂಗಳೂರು, ಮೇ 25: 201516ನೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಣಚೂರು ಮಹಿಳಾ ಪದವಿಪೂರ್ವ ಕಾಲೇಜು ಒಟ್ಟು 91.89 ಶೇ. ಫಲಿತಾಂಶವನ್ನು ದಾಖಲಿಸಿದೆ.
ಕಾಲೇಜಿನ ಕಲಾ ವಿಭಾಗದಿಂದ 26 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 19 ಮಂದಿ ಉತ್ತೀರ್ಣರಾಗಿದ್ದು, 73 ಶೇ. ಫಲಿತಾಂಶ ಲಭಿಸಿದೆ. ವಿದ್ಯಾರ್ಥಿನಿ ಫಾತಿಮಾ ಶಲೀಫಾ 519 ಅಂಕಗಳನ್ನು ಗಳಿಸಿ 86.50 ಶೇ. ಫಲಿತಾಂಶ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಿಂದ 58 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 57 ಮಂದಿ ಉತ್ತೀರ್ಣರಾಗಿದ್ದು, 98 ಶೇ. ಫಲಿತಾಂಶ ಲಭಿಸಿದೆ. ವಿದ್ಯಾರ್ಥಿನಿ ಆಶಿಕಾ 552(ಶೇ. 92)ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಿಂದ 27 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 26 ಮಂದಿ ಉತ್ತೀರ್ಣರಾಗಿ, ವಿಭಾಗವು 96.29ಶೇ ಫಲಿತಾಂಶ ಪಡೆದುಕೊಂಡಿದೆ. ವಿದ್ಯಾರ್ಥಿನಿ ಫೌಝಿಯಾ 523(ಶೇ. 87.16) ಅಂಕಗಳನ್ನು ಪಡೆದುಕೊಂಡಿದ್ದಾರೆ.