ಪಿಯುಸಿ ಫಲಿತಾಂಶ: ದ.ಕ. ಜಿಲ್ಲೆಯಲ್ಲಿ ಬಾಲಕಿಯರದ್ದೇ ಮೇಲುಗೈ

Update: 2016-05-25 16:25 GMT

ಗಳೂರು, ಮೇ 25: ಇಂದು ರಾಜ್ಯಾದ್ಯಂತ ಪ್ರಕಟಗೊಂಡಿರುವ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಶೇ. 90.48 ಫಲಿತಾಂಶ ದಾಖಲಾಗಿದೆ.

ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ 31,335 ವಿದ್ಯಾರ್ಥಿಗಳ ಪೈಕಿ 28,351 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕಲಾ ವಿಭಾಗ

ಪರೀಕ್ಷೆ ಬರೆದ 4857 ವಿದ್ಯಾರ್ಥಿಗಳಲ್ಲಿ 3950 ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದು, ಶೇ. 81.33 ಫಲತಾಂಶ ಬಂದಿದೆ.

ವಾಣಿಜ್ಯ ವಿಭಾಗ

ವಿಭಾಗದಲ್ಲಿ 13,752 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 12,528 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ. 91.1 ಫಲಿಂತಾಂಶ ದಾಖಲಾಗಿದೆ.

ವಿಜ್ಞಾನ ವಿಭಾಗ

ಈ ವಿಭಾಗದಲ್ಲಿ ಪರೀಕ್ಷೆ ಬರೆದ 12,726 ವಿದ್ಯಾರ್ಥಿಗಳ ಪೈಕಿ 11,873 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಜಿಲ್ಲೆಗೆ ವಿಜ್ಞಾನ ವಿಭಾಗದಲ್ಲಿ ಶೇ. 93.3 ಫಲಿತಾಂಶ ಬಂದಿದೆ.

ನಗರ ವಿದ್ಯಾರ್ಥಿಗಳ ಮೇಲುಗೈ

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರ ವಿದ್ಯಾರ್ಥಿಗಳು ಶೇ. 91.08 ಹಾಗೂ ಗ್ರಾಮೀಣ ವಿದ್ಯಾರ್ಥಿಗಳು 89.12 ಫಲಿತಾಂಶ ಪಡೆದಿದ್ದಾರೆ. ಪರೀಕ್ಷೆ ಬರೆದ ಜಿಲ್ಲೆಯ ನಗರ ಪ್ರದೇಶಗಳ 21,694 ವಿದ್ಯಾರ್ಥಿಗಳಲ್ಲಿ 19,759 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ಗ್ರಾಮೀಣ ಪ್ರದೇಶಗಳ 9641 ವಿದ್ಯಾರ್ಥಿಗಳಲ್ಲಿ 8592 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News