×
Ad

ಪಿಯುಸಿ: ಬೆಳ್ತಂಗಡಿ ತಾಲೂಕಿನ ಕಾಲೇಜುಗಳಿಗೆ ಉತ್ತಮ ಫಲಿತಾಂಶ

Update: 2016-05-25 21:56 IST

ಬೆಳ್ತಂಗಡಿ, ಮೇ 25: ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ತಾಲೂಕಿನ ಪ್ರಮುಖ ಕಾಲೇಜುಗಳಾದ ಉಜಿರೆ ಎಸ್‌ಡಿಎಂ ಸನಿವಾಸ ಕಾಲೇಜು ಶೇ. 98.72, ವಾಣಿ ಕಾಲೇಜು ಶೇ. 97.33, ಎಸ್‌ಡಿಎಂ ಉಜಿರೆ ಶೇ. 91.89, ಹಾಗೂ ಪೂಂಜಾಲಕಟ್ಟೆ ಸರಕಾರಿ ಕಾಲೇಜು ಶೇ.91 ಫಲಿತಾಂಶ ದಾಖಲಿಸಿವೆ.

ಉಜಿರೆ ಎಸ್‌ಡಿಎಂ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.89.44 ಫಲಿತಾಂಶ ಬಂದಿದ್ದು 99 ಮಂದಿ ಉನ್ನತ ಶ್ರೇಣಿ, 307 ಮಂದಿ ಪ್ರಥಮ ಶ್ರೇಣಿ, 26 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ನಿಖಿಲ್ ಎನ್.ಆರ್. 584 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ. 95.44 ಫಲಿತಾಂಶ ಬಂದಿದ್ದು 72 ಮಂದಿ ಉನ್ನತ ಶ್ರೇಣಿ, 201 ಪ್ರಥಮ ಶ್ರೇಣಿ, 47 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರೇಯಾ ಡಿ. ನಾಯಕ್ 583 ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 91.04 ಫಲಿತಾಂಶ ಬಂದಿದ್ದು 6 ಮಂದಿ ಉನ್ನತ ಶ್ರೇಣಿ, 33 ಮಂದಿ ಪ್ರಥಮ ಶ್ರೇಣಿ, 18 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ನಮಿತಾ ಜೊಯಿಸ್ ಕೆ.ಎಸ್. 565 ಅಂಕ ಪಡೆದಿದ್ದಾರೆ. ಉಜಿರೆ ಎಸ್‌ಡಿಎಂ ಸನಿವಾಸ ಕಾಲೇಜು ಶೇ. 98.72 ಫಲಿತಾಂಶ ದಾಖಲಿಸಿದ್ದು, ವಿಜ್ಞಾನ ವಿಭಾಗದ 156 ವಿದ್ಯಾರ್ಥಿಗಳಲ್ಲಿ 154 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಆಕಾಶ್ ಟಿ. ಸಜ್ಜನ್ 588 ಅಂಕ ಪಡೆದಿದ್ದಾರೆ. 38 ಮಂದಿ ಉನ್ನತ ಶ್ರೇಣಿ ಹಾಗೂ 114 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

 
ಅನುಗ್ರಹ ಕಾಲೇಜು ಶೇ.85 ಫಲಿತಾಂಶ ಪಡೆದಿದ್ದು, ವಾಣಿಜ್ಯ ವಿಭಾಗದಲ್ಲಿ ಶೇ.86.4 ಫಲಿತಾಂಶವಿದ್ದು, ನಿಶಾ ಡಿಕೋಸ್ಟ್ 543 ಅಂಕ ಪಡೆದಿದ್ದಾರೆ. 5 ಮಂದಿ ಉನ್ನತ ಶ್ರೇಣಿ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಶೇ.82 ಫಲಿತಾಂಶ ಬಂದಿದ್ದು ಮೀನಾಕ್ಷಿ 517 ಅಂಕ ಪಡೆದಿದ್ದಾರೆ. ಇಬ್ಬರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮುಂಡಾಜೆ ಕಾಲೇಜು ಶೇ.92 ಫಲಿತಾಂಶ ದಾಖಲಿಸಿದೆ. ಇಲ್ಲಿ ವಾಣಿಜ್ಯ ವಿಭಾಗಕ್ಕೆ 95.51 ಫಲಿತಾಂಶ ಬಂದಿದ್ದು, ನವ್ಯಶ್ರೀ 543 ಹಾಗೂ ಅನೂಷಾ 542 ಅಂಕ ಪಡೆದಿದ್ದಾರೆ. 4 ಮಂದಿ ಉನ್ನತ ಶ್ರೇಣಿಯಲ್ಲಿ, 34 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 84.21 ಫಲಿತಾಂಶ ಬಂದಿದ್ದು, ಸುರೇಖಾ 514 ಅಂಕ ಪಡೆದಿದ್ದಾರೆ. ಒರ್ವ ಉನ್ನತ ಶ್ರೇಣಿಯಲ್ಲಿ, 21 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಳದಂಗಡಿ ಕಾಲೇಜು ಶೇ 80 ಫಲಿತಾಂಶ ಪಡೆದಿದ್ದು ವಿಜ್ಞಾನ ವಿಭಾಗದಲ್ಲಿ ಶೇ. 85, ವಾಣಿಜ್ಯ ವಿಭಾಗದಲ್ಲಿ ಶೇ. 91, ಕಲಾ ವಿಭಾಗದಲ್ಲಿ ಶೇ. 80 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಸುಪ್ರಿಯಾ 499 ಅಂಕ ಪಡೆದಿದ್ದಾರೆ.


 
 ಪುಂಜಾಲಕಟ್ಟೆ ಕಾಲೇಜು ಶೇ.91 ಫಲಿತಾಂಶ ಪಡೆದಿದೆ. ಇಲ್ಲಿ ವಿಜ್ಞಾನ ವಿಭಾಗಕ್ಕೆ ಶೇ.93.18 ಬಂದಿದ್ದು ಯಶ್ಮಿತಾ 533 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗಕ್ಕೆ 92.85 ಬಂದಿದ್ದು ಚೇತನಾ ಕೆ. 541 ಅಂಕ ಪಡೆದಿದ್ದಾರೆ. ಕಲಾ ವಿಭಾಗಕ್ಕೆ ಶೇ. 87 ಬಂದಿದ್ದು ಮಣಿಶ್ರೀ 520 ಅಂಕ ಪಡೆದಿದ್ದಾರೆ. ಅರಸಿನಮಕ್ಕಿ ಕಾಲೇಜಿಗೆ ಶೇ.96 ಫಲಿತಾಂಶ ಬಂದಿದ್ದು ಕಲಾ ವಿಭಾಗದ 16 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶುಭಕರ ಎಂ. 491 ಅಂಕ ಪಡೆದಿದ್ದಾರೆ. ಬೆಳ್ತಂಗಡಿ ಸೈಂಟ್ ತೆರೆಸಾ ಕಾಲೇಜು 96.66 ಶೇ. ಫಲಿತಾಂಶ ಪಡೆದಿದೆ. ವಾಣಿಜ್ಯ ವಿಭಾಗವು 97.61 ಶೇ. ಫಲಿತಾಂಶ ಪಡೆದಿದ್ದು, ವಿಲ್ಸನ್ ಜೋಯ್ ಗಲ್ತಾವೋ 533 ಅಂಕ ಪಡೆದಿದ್ದಾರೆ. ಕಲಾ ವಿಭಾಗವೂ ಶೇ.100 ಪಡೆದಿದ್ದು ಸಂತೋಷ್ ಮೋರಸ್ 496 ಅಂಕ ಪಡೆದಿದ್ದಾರೆ. ಬೆಳ್ತಂಗಡಿಯ ವಾಣಿ ಕಾಲೇಜು ಶೇ. 97.33 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗಕ್ಕೆ 91.22 ಶೇ. ಫಲಿತಾಂಶ ಬಂದಿದ್ದು, 8 ಮಂದಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಭಿಷೇಕ ಹರಿಶ್ಚಂದ್ರ 554 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗಕ್ಕೆ ಶೇ. 100 ಫಲಿತಾಂಶ ಬಂದಿದೆ. ಎಲ್ಲಾ 204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 41 ಮಂದಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಮೃತಾ 570 ಅತೀ ಹೆಚ್ಚಿನ ಅಂಕ ಪಡೆದಿದ್ದಾರೆ. ಕಲಾ ವಿಭಾಗಕ್ಕೆ 91.89 ಶೇ. ಬಂದಿದ್ದು ಓರ್ವ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ದೀಕ್ಷಾ ಎ.ವಿ. 524 ಅಂಕ ಪಡೆದಿದ್ದಾರೆ.
ಬೆಳ್ತಂಗಡಿಯ ಗುರುದೇವ ಕಾಲೇಜಿಗೆ ಶೇ. 96 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗವು ಶೇ. 100 ಫಲಿತಾಂಶ ದಾಖಲಿಸಿದ್ದು 22 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಬ್ಬರು ಉನ್ನತ ಶ್ರೇಣಿ, 13 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ದಿವ್ಯಾ ಹಾಗೂ ನಿತ್ಯಾ ಎಸ್. 514 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗವು ಶೇ. 96.81 ಫಲಿತಾಂಶ ಪಡೆದಿದೆ. 9 ಮಂದಿ ಉನ್ನತ ಶ್ರೇಣಿಯಲ್ಲಿ, 65 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರನಿತಾ 585 ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಶೇ.88 ಫಲಿತಾಂಶ ಬಂದಿದೆ. 12 ಮಂದಿ ಉನ್ನತ ಶ್ರೇಣಿಯಲ್ಲಿ, 7 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಚೈತ್ರಾ ಕೆ. 457 ಅಂಕ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News