ಕಾರಿನಲ್ಲಿ ಗ್ಯಾಸ್ ಸೋರಿಕೆ :ಅಪಾಯದಿಂದ ಪಾರು
Update: 2016-05-25 22:49 IST
ಮಂಗಳೂರು, ಮೇ 25: ನಗರದ ಖಾಸಗಿ ಆಸ್ಪತ್ರೆಯೊಂದರ ಆವರಣದಲ್ಲಿ ನಿಲ್ಲಿಸಿದ್ದ ಓಮ್ನಿ ಕಾರಿನ ಗ್ಯಾಸ್ ಸೋರಿಕೆಯಾಗಿ ಸೆಕ್ಯುರಿಟಿ ಗಾರ್ಡ್‌ಗಳ ಸಮಯಪ್ರಜ್ಞೆಯಿಂದ ಸಂಭಾವ್ಯ ಅನಾಹುತವೊಂದುತಪ್ಪಿದ ಘಟನೆ ಇಂದು ಸಂಜೆ ನಡೆದಿದೆ.
ಬಾಡಿಗೆ ಕಾರೊಂದನ್ನು ಕಂಕನಾಡಿ ಾದರ್‌ಮುಲ್ಲರ್ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಲಾಗಿತ್ತು. ಇದರಿಂದ ಗ್ಯಾಸ್ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ಆಸ್ಪತ್ರೆಯ ಸೆಕ್ಯುರಿಟಿಗಾರ್ಡ್‌ಗಳು ಜಾಗೃತಗೊಂಡು ಅಗ್ನಿಶಾಮಕ ಸಾಧನದೊಂದಿಗೆ ನಿಯಂತ್ರಿಸಲೆತ್ನಿಸಿದರೂ ಲಕಾರಿಯಾಗಲಿಲ್ಲ.
ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಕಾರ್ಯಾಚರಣೆ ಮೂಲಕ ಗ್ಯಾಸ್ ಸೋರಿಕೆಯನ್ನು ತಡೆಗಟ್ಟಿದ್ದರು. ಬಳಿಕ ಆವರಣದಿಂದ ರಸ್ತೆ ಬದಿಗೆ ಸ್ಥಳಾಂತರಿಸಲಾಯಿತು.