×
Ad

ಇಂಡೊನೇಶ್ಯ: ಮಕ್ಕಳ ಅತ್ಯಾಚಾರಿಗಳಿಗೆ ವೃಷಣ ಛೇದನ ಶಿಕ್ಷೆ

Update: 2016-05-25 22:52 IST

ಜಕಾರ್ತ,ಮೇ 27: ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರವೆಸಗುವವರಿಗೆ ರಾಸಾಯನಿಕ ಬಳಸಿ ವೃಷಣಛೇದನ ಸೇರಿದಂತೆ ಕಠಿಣವಾದ ಶಿಕ್ಷೆಗಳನ್ನು ವಿಧಿಸಲು ಅವಕಾಶ ನೀಡುವ ಶಾಸನವೊಂದನ್ನು ಇಂಡೊನೇಶ್ಯ ಸರಕಾರ ಜಾರಿಗೊಳಿಸಿದೆ.

 ದೇಶದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೂತನ ಆದೇಶವನ್ನು ಜಾರಿಗೆ ತರಲಾಗಿದೆಯೆಂದು ಇಂಡೊನೇಶ್ಯ ಅಧ್ಯಕ್ಷ ಜೊಕೊ ಜೊಕೊವಿ ವಿಡೊಡೊ ತಿಳಿಸಿದ್ದಾರೆ. ಮಕ್ಕಳ ವಿರುದ್ಧ ಲೈಂಗಿಕ ಅಪರಾಧಗಳು ಅತ್ಯಂತ ಗಂಭೀರವಾದ ಅಪರಾಧವಾಗಿದ್ದು, ಅದು ಮಕ್ಕಳ ಬಾಳಿನ ಮೇಲೆ ಅಪಾಯಕಾರಿ ಪರಿಣಾಮಗಳನ್ನುಂಟು ಮಾಡುತ್ತವೆಯೆಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು 14 ಮಂದಿಯ ಗುಂಪೊಂದು ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ, ಹತ್ಯೆಗೈದ ಘಟನೆಯ ಹಿನ್ನೆಲೆಯಲ್ಲಿ ಅತ್ಯಾಚಾರಿಗಳಿಗೆ ಅತ್ಯಂತ ಕಠಿಣವಾದ ಶಿಕ್ಷೆಯನ್ನು ವಿಧಿಸಬೇಕೆಂಬ ಬೇಡಿಕೆಗಳು ಬಲವಾಗಿ ಕೇಳಿಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News