ಉಪ್ಪಿನಂಗಡಿ ಸರಕಾರಿ ಕಾಲೇಜಿಗೆ ಶೇ. 93.39 ಫಲಿತಾಂಶ
ಪುತ್ತೂರು, ಮೇ 25: ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ 318 ವಿದ್ಯಾರ್ಥಿಗಳ ಪೈಕಿ 297 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.93.39 ಫಲಿತಾಂಶ ಪಡೆದುಕೊಂಡಿದೆ. 24 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಬಾಗದಲ್ಲಿ ಪರೀಕ್ಷೆಗೆ ಹಾಜರಾದ 41 ವಿದ್ಯಾರ್ಥಿಗಳಲ್ಲಿ 39 ಮಂದಿ ಉತ್ತೀರ್ಣರಾಗಿದ್ದು ಶೇ.95.12 ಫಲಿತಾಂಶ ಬಂದಿದೆ. 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಮುಬೀನಾ ಸುರಯ 558 (93ಶೇ) ಪ್ರಥಮ ಮತ್ತು ಕಾವ್ಯಶ್ರೀ 552 (92ಶೇ.) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 167 ವಿದ್ಯಾರ್ಥಿಗಳ ಪೈಕಿ 164 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದು ಶೇ 98.20 ಫಲಿತಾಂಶ ಲಭಿಸಿದೆ. ಹರ್ಷಿತಾಕುಮಾರಿ 577 (96.17 ಶೇ.) ಪ್ರಥಮ ಮತ್ತು ಅಮೀರಾ ಸಂಶದ್ 569 (94.83 ಶೇ) ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 110 ವಿದ್ಯಾರ್ಥಿಗಳಲ್ಲಿ 94 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಶೇ. 85.45 ಫಲಿತಾಂಶ ಲಭಿಸಿದೆ. ಶಹನಾಝ್ 490 (81.66 ಶೇ.) ಪ್ರಥಮ ಮತ್ತು ಶೀಬಾ ಬಿ 489 (81.5 ಶೇ.) ದ್ವಿತೀಂು ಸ್ಥಾನ ಪಡೆದುಕೊಂಡಿದ್ದಾರೆ.