×
Ad

ದಿಲ್ಲಿ ವಿಧಾನಸಭೆಯ ಆವರಣದಲ್ಲಿ ಬೆಂಕಿ

Update: 2016-05-25 23:39 IST

ಹೊಸದಿಲ್ಲಿ, ಮೇ 25: ದಿಲ್ಲಿಯ ವಿಧಾನಸಭೆಯ ಆವರಣದಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, 8 ಅಗ್ನಿಶಾಮಕ ವಾಹನಗಳು ಅಲ್ಲಿಗೆ ಧಾವಿಸಿವೆ.

ಮುಂಜಾನೆ 9:45ರ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಉತ್ತರ ದಿಲ್ಲಿಯ ಸಿವಿಲ್ ಲೈನ್ ಪ್ರದೇಶದಲ್ಲಿರುವ ವಿಧಾನಸಭೆಯ ಪ್ರವೇಶದ್ವಾರದ ಸಮೀಪದ ಸ್ವಾಗತ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಹವಾ ನಿಯಂತ್ರಕ ಒಂದರಲ್ಲಿ ಶಾರ್ಟ್ ಸರ್ಕ್ಯೂಟ್ ಆದುದು ಬೆಂಕಿಗೆ ಕಾರಣವೆಂದು ಶಂಕಿಸಲಾಗಿದೆ. ಬೆಂಕಿ ಮುಂಜಾನೆ 10:10ರ ವೇಳೆ ನಿಯಂತ್ರಣಕ್ಕೆ ಬಂದಿತೆಂದು ಅಗ್ನಿ ಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News